ಭದ್ರಾವತಿ ಆಕಾಶವಾಣಿಯಲ್ಲಿ ಹೆಲ್ತ್ ಹಿಂಟ್ಸ್, ಬದುಕು ಜಟಕಾಬಂಡಿ ಕಾರ್ಯಕ್ರಮ, ಟೈಮಿಂಗ್‌ ಏನು?

ಶಿವಮೊಗ್ಗ: ಆಕಾಶವಾಣಿ ಭದ್ರಾವತಿ ಕೇಂದ್ರದಿಂದ ಹೆಲ್ತ್‌ ಹಿಂಟ್ಸ್‌ ಮತ್ತು ಬದುಕು ಜಟಕಾಬಂಡಿ ವಿಶೇಷ ಕಾರ್ಯಕ್ರಮಗಳನ್ನು (special programs) ಆಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಡಿ.15ರಿಂದ ಪ್ರತಿದಿನ ಬೆಳಿಗ್ಗೆ 6.45ಕ್ಕೆ ಶಿವಮೊಗ್ಗದ ಸರ್ಜಿ ಆಸ್ಪತ್ರೆಯ ಪ್ರಾಯೋಜಕತ್ವದಲ್ಲಿ ವಿವಿಧ ವಿಷಯ ತಜ್ಞರಿಂದ ಹಲವು ರೋಗಗಳಿಗೆ ಸಂಬಂಧಿಸಿದಂತೆ 5 ನಿಮಿಷದ ಮಾಹಿತಿ ಹೆಲ್ತ್ ಹಿಂಟ್ಸ್ ಎಂಬ ವಿಶೇಷ ಸರಣಿ ಕಾರ್ಯಕ್ರಮ ಪ್ರಸಾರವಾಗಲಿದೆ. ಡಿ.16 ರಿಂದ ಪ್ರತೀ ಮಂಗಳವಾರ ಬೆಳಗ್ಗೆ 7.15ಕ್ಕೆ ಕಷ್ಟಕರ ಬದುಕಿನೊಂದಿಗೆ ಉನ್ನತ ಸ್ಥಾನಕ್ಕೇರಿದ ವಿವಿಧ ಸಾಧಕರನ್ನು ಪರಿಚಯಿಸುವ ಬದುಕು ಜಟಕಾಬಂಡಿ ಎಂಬ 15 ನಿಮಿಷದ ವಿಶೇಷ ಕಾರ್ಯಕ್ರಮ ಪ್ರಸಾರವಾಗಲಿದೆ ಎಂದು ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ ಎಸ್.ಆರ್. ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

utsav-exhibition.webp

ಇದನ್ನೂ ಓದಿ » ಶಿವಮೊಗ್ಗದ 2 ಪ್ರಮುಖ ರೈಲ್ವೆ ಮಾರ್ಗ ಯೋಜನೆ ಸ್ಥಗಿತ, ಸಂಸದ ರಾಘವೇಂದ್ರ ಆಕ್ರೋಶ, ಕಾರಣವೇನು?

111023-Bhadravathi-Radio-FM-Radio.webp

Leave a Comment