ಕುಟುಂಬದವರೆಲ್ಲ ಮಲಗಿದ್ದಾಗಲೇ ಮನೆಯಲ್ಲಿ ಕಳ್ಳತನ, ಲಕ್ಷ ಲಕ್ಷದ ಚಿನ್ನಾಭರಣ, ಹಣ ನಾಪತ್ತೆ, ಹೇಗಾಯ್ತು ಘಟನೆ?

 ಶಿವಮೊಗ್ಗ  LIVE 

ತೀರ್ಥಹಳ್ಳಿ: ಕೋಣಂದೂರಿನ ಸೊನಗಾರರೆ ಕೇರಿಯ ಮನೆಯೊಂದರಲ್ಲಿ ಮಧ್ಯರಾತ್ರಿ ಕಳ್ಳರು ಮನೆಯೊಂದರ ಹಿಂಬಾಗಿಲು ಮುರಿದು ಬೀರುವಿನಲ್ಲಿದ್ದ ₹6.90 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದೊಯ್ದಿದ್ದಾರೆ (thieves steal).

ಹಿಂಬಾಗಿಲಿನಿಂದ ಸೀತಾರಾಮ್ ಎಂಬುವವರ ಮನೆಯೊಳಕ್ಕೆ ಪ್ರವೇಶಿಸಿದ ಕಳ್ಳರು ಬೀಗ ಹಾಕದ ಬೀರುವಿನಲ್ಲಿದ್ದ ₹40,000 ನಗದು, ಇನ್ನೊಂದು ಬೀರುವಿನಲ್ಲಿದ್ದ ಮಾಂಗಲ್ಯ ಸರ, ಚಿನ್ನದ ಸರ, ಉಂಗುರ, ಕಿವಿಯೋಲೆ ಕದ್ದೊಯ್ದಿದ್ದಾರೆ. ಮನೆಯವರೆಲ್ಲರೂ ಮನೆಗಿದ್ದಾಗಲೇ ಈ ಕೃತ್ಯ ನಡೆದಿದೆ ಎಂದು ಆರೋಪಿಸಲಾಗಿದೆ.

KONANDUR-THIRTHAHALLI-NEWS

ಇದನ್ನೂ ಓದಿ » ಶಿವಮೊಗ್ಗದಲ್ಲಿ ಮಾಸ್ಟರ್‌ ಹೆಲ್ತ್‌ ಚೆಕ್‌ ಅಪ್‌ ಪ್ಯಾಕೇಜ್‌ಗೆ ಶೇ.25ರಷ್ಟು ರಿಯಾಯಿತಿ, ಏನೇನೆಲ್ಲ ಚೆಕ್‌ ಮಾಡ್ತಾರೆ?

ಬೆಳಗ್ಗೆ ಎದ್ದ ಕೂಡಲೇ ಚೆಲ್ಲಾಪಿಲ್ಲಿಯಾಗಿದ್ದ ಬೀರುವಿನೊಳಗಿನ ವಸ್ತುಗಳು ಹಾಗೂ ಹಿಂಬಾಗಿಲು ತೆರೆದಿರುವುದನ್ನು ಮನೆಯವರು ನೋಡಿದಾಗ ಕಳ್ಳತನದ ಪ್ರಕರಣ ಬೆಳಕಿಗೆ ಬಂದಿದೆ. ತೀರ್ಥಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment