ಶಿವಮೊಗ್ಗದ ಎರಡು ಎಕ್ಸ್‌ಪ್ರೆಸ್‌ ರೈಲುಗಳು ಇನ್ಮುಂದೆ ಸೂಪರ್‌ ಫಾಸ್ಟ್‌ ರೈಲುಗಳು, ಯಾವ್ಯಾವ ರೈಲು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ರೈಲ್ವೆ ಸುದ್ದಿ: ನೈಋತ್ಯ ರೈಲ್ವೆ ಪರಿಷ್ಕೃತ ಟೈಮ್‌ಟೇಬಲ್‌ ಬಿಡುಗಡೆ ಮಾಡಿದೆ. 2026ರ ಜನವರಿ 1ರಿಂದ ಇದು ಜಾರಿಗೊಳ್ಳಲಿದೆ. ಈ ವೇಳಾಪಟ್ಟಿಯ ಪ್ರಕಾರ ನೈಋತ್ಯ ರೈಲ್ವೆಯ 16 ಎಕ್ಸ್‌ಪ್ರೆಸ್‌ ರೈಲುಗಳನ್ನು ಸೂಪರ್‌ ಫಾಸ್ಟ್‌ ರೈಲುಗಳಾಗಿ (Superfast Trains) ಪರಿವರ್ತಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯ ಕೆಲವು ರೈಲುಗಳನ್ನು ಸೂಪರ್‌ ಫಾಸ್ಟ್‌ ರೈಲುಗಳಾಗಿ ಪರಿವರ್ತಿಸಲಾಗಿದೆ. ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.  

ಸೂಪರ್‌ ಫಾಸ್ಟ್‌ ಆಗಲಿರುವ ರೈಲುಗಳು

» TRAIN 1

ಎಂಜಿಆರ್‌ ಚೆನ್ನೈ – ಶಿವಮೊಗ್ಗ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 12691) ಜನವರಿ 2ರಿಂದ ಸೂಪರ್‌ ಫಾಸ್ಟ್‌ ಆಗಲಿದೆ. ಶಿವಮೊಗ್ಗ – ಎಂಜಿಆರ್‌ ಚೆನ್ನೈ ಎಕ್ಸ್‌ಪ್ರೆಸ್‌  (ರೈಲು ಸಂಖ್ಯೆ 12692) ಜನವರಿ 3 ರಿಂದ ಸೂಪರ್‌ ಫಾಸ್ಟ್‌ ಆಗಲಿದೆ.

-Super-Fast-Trains-for-Shivamogga

ಇದನ್ನೂ ಓದಿ » ಶಿವಮೊಗ್ಗದಲ್ಲಿ ತೆರೆಯಿತು ವೈಕುಂಠ ದ್ವಾರ, ದೇವರ ದರ್ಶನ ಪಡೆದ ಭಕ್ತ ಸಾಗರ

» TRAIN 2

ಯಶವಂತಪುರ – ಶಿವಮೊಗ್ಗ ಎಕ್ಸ್‌ಪ್ರೆಸ್‌ : ಈತನಕ ರೈಲು ಸಂಖ್ಯೆ 16579 ಇತ್ತು. ಫೆಬ್ರವರಿ 19ರಿಂದ ರೈಲು ಸಂಖ್ಯೆ 20689 ಎಂದು ಬದಲಾಗಲಿದೆ. ಶಿವಮೊಗ್ಗ – ಯಶವಂತಪುರ ಎಕ್ಸ್‌ಪ್ರೆಸ್‌ : ಈತನಕ ರೈಲು ಸಂಖ್ಯೆ 16580 ಇತ್ತು. ಫೆಬ್ರವರಿ 20ರಿಂದ ರೈಲು ಸಂಖ್ಯೆ 20690 ಎಂದು ಬದಲಾಗಲಿದೆ. ಆ ದಿನದಿಂದ ಈ ರೈಲು ಸೂಪರ್‌ ಫಾಸ್ಟ್‌ ಆಗಲಿದೆ.

Leave a Comment