ಹೊಸ ವರ್ಷಾಚರಣೆ ಮುನ್ನ ಶಿವಮೊಗ್ಗದ ಕೇಕ್‌ ತಯಾರಿಕಾ ಘಟಕಗಳ ಮೇಲೆ ದಾಳಿ, ಏನೇನೆಲ್ಲ ಸಿಕ್ತು?

 ಶಿವಮೊಗ್ಗ  LIVE 

ಶಿವಮೊಗ್ಗ: ಹೊಸ ವರ್ಷಾಚರಣೆ ಹೊಸ್ತಿಲಲ್ಲಿ, ಶಿವಮೊಗ್ಗ ನಗರದ ಎರಡು ಕೇಕ್‌ (Cake ) ತಯಾರಿಕಾ ಘಟಕಗಳ ಮೇಲೆ ಉಪ ವಿಭಾಗಾಧಿಕಾರಿ ಸತ್ಯಾನಾರಾಯಣ ನೇತೃತ್ವದ ತಂಡ ದಾಳಿ ನಡೆಸಿದೆ. ಪರಿಶೀಲನೆ ನಡೆಸಿ ಮಾಲೀಕರಿಗೆ ನೊಟೀಸ್‌ ನೀಡಲಾಗಿದೆ.

ರವೀಂದ್ರ ನಗರದಲ್ಲಿರುವ ಕೇಕ್‌ ತಯಾರಕ ಘಟಕಗಳ ಮೇಲೆ ಇಂದು ಸಂಜೆ ದಾಳಿ ನಡೆಸಲಾಗಿದೆ.  

ದಾಳಿ ವೇಳೆ ಏನೇನೆಲ್ಲ ಕಾಣಿಸ್ತು?

ದಾಳಿ ಸಂಬಂಧ ಉಪ ವಿಭಾಗಾಧಿಕಾರಿ ಸತ್ಯನಾರಾಯಣ, ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದರು. ಇಲ್ಲಿ ಅವರು ತಿಳಿಸಿದ ಮೂರು ಪ್ರಮುಖಾಂಶ.

POINT-1ಸಾರ್ವಜನಿಕರಿಂದ ಬಂದ ದೂರುಗಳ ಹಿನ್ನೆಲೆ ಶಿವಮೊಗ್ಗದ ಎರಡು ಕೇಕ್‌ ತಯಾರಿಕಾ ಘಟಕಗಳ ಮೇಲೆ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದೆವು.

POINT-2ತಪಾಸಣೆ ವೇಳೆ ಅಶುಚಿಯಾದ ವಾತಾವರಣ ಮತ್ತು ಅವಧಿ ಮುಗಿದಿರುವ ಕಚ್ಚಾ ವಸ್ತುಗಳು ಪತ್ತೆಯಾಗಿವೆ. ಮಹಾನಗರ ಪಾಲಿಕೆಯ ವಾಹನಗಳ ಕರೆಯಿಸಿ ಸ್ಥಳದಲ್ಲೇ ಅವುಗಳನ್ನು ನಾಶಪಡಿಸಲಾಗಿದೆ ಎಂದರು.

POINT-3ನಿಯಮ ಉಲ್ಲಂಘಿಸಿದ ಘಟಕಗಳಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಇಂತಹ ಲೋಪ ಮರುಕಳಿಸಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

Raid-on-Cake-making-centers-in-Shimoga

ಇದನ್ನೂ ಓದಿ » ಶಿವಮೊಗ್ಗ ಜನಶತಾಬ್ದಿ ಸೇರಿ ಹಲವು ರೈಲುಗಳ ಪ್ರಯಾಣ ಅವಧಿ ಕಡಿತ, ಯಶವಂತಪುರ ರೈಲಿನ ವೇಳಾಪಟ್ಟಿ ಬದಲು

ಉಪ ವಿಭಾಗಾಧಿಕಾರಿ ಸತ್ಯನಾರಾಯಣ, ಆಹಾರ ಮತ್ತು ನಾಗರಿಕ ಸಬರಾಜು ಇಲಾಖೆ ಉಪ ನಿರ್ದೇಶಕ ಅವಿನ್‌, ತಾಲೂಕು ವೈದ್ಯಾಧಿಕಾರಿ ಡಾ. ಚಂದ್ರಶೇಖರ್‌ ಒಳಗೊಂಡ ತಂಡ ದಾಳಿ ನಡೆಸಿದೆ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment