ಶಿವಮೊಗ್ಗದಲ್ಲಿ ನಿವೃತ್ತ ಪೊಲೀಸ್‌ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಕಟ್ಟಡಕ್ಕೆ ಭೂಮಿ ಪೂಜೆ

ಶಿವಮೊಗ್ಗ: ಇಲ್ಲಿನ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಡಿಎಆರ್ ಆವರಣದಲ್ಲಿ ನಿರ್ಮಿಸಲಾಗುತ್ತಿರುವ ಸಂಘದ ನೂತನ ಕಟ್ಟಡಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌ ಭೂಮಿ ಪೂಜೆ (foundation stone) ನೆರವೇರಿಸಿದರು.

ಇದೇ ಸಂದರ್ಭ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌, ಪೊಲೀಸರ ನಿವೃತ್ತ ಬದುಕು ಸುಂದರವಾಗಿರಬೇಕು. ಅದಕ್ಕೆ ಬೇಕಾದ ಅನುಕೂಲತೆಗಳನ್ನು ನಾವೇ ಮಾಡಿಕೊಳ್ಳುವುದು ಅನಿವಾರ್ಯ ಎಂದರು.

ನಿವೃತ್ತ ಪೊಲೀಸ್ ಅಧಿಕಾರಿಗಳ ಬಹು ದಿನದ ಕನಸು ಈಗ ನನಸಾಗುತ್ತಿದೆ. ಇಲಾಖೆಯಲ್ಲಿ ಕಾರ್ಯನಿರ್ವಹಿಸುವಾಗ ಇರುವ ಕಾಳಜಿ, ನಿವೃತ್ತರಾದ ಮೇಲೂ ಮುಂದುವರೆಯಬೇಕು.ಜಿ.ಕೆ.ಮಿಥುನ್‌ ಕುಮಾರ್‌, ಜಿಲ್ಲಾ ರಕ್ಷಣಾಧಿಕಾರಿ

ಇದನ್ನೂ ಓದಿ » ಶಿವಮೊಗ್ಗದ 120 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ, ವಿಜ್ಞಾನಿಯಿಂದ ಪ್ರಮುಖ ಸಲಹೆ, ಏನೇನೆಲ್ಲ ಹೇಳಿದರು?

28 ವರ್ಷಗಳಿಂದ ಸಂಘಟನೆ ಕಟ್ಟಿಕೊಂಡು ನಮ್ಮದೇ ನೂತನ ಕಟ್ಟಡ ನಿರ್ಮಿಸಬೇಕು ಎಂದು ಪ್ರಯತ್ನ ಪಟ್ಟಿದ್ದೆವು. ಎಸ್‌ಪಿ ಮಿಥುನ್‌ಕುಮಾರ್‌ ಅವರ ಸಹಕಾರದಿಂದ ಈಗ ಕಟ್ಟಡದ ಶಿಲಾನ್ಯಾಸ ಮಾಡಲಾಗುತ್ತಿದೆ.ಮಂಜಪ್ಪ, ಸಂಘದ ಅಧ್ಯಕ್ಷ

Retired-police-bhavana-pooje-at-Shimoga-DAR-Ground

ಎಎಸ್‌ಪಿ ಕಾರಿಯಪ್ಪ, ಪ್ರೊಬೇಷನರಿ ಐಪಿಎಸ್ ಅಧಿಕಾರಿ ಮೇಘಾ ಅಗರವಾಲ್, ಡಿವೈಎಸ್‌ಪಿ ಬಾಬು ಅಂಜನಪ್ಪ, ಡಿಎಆರ್ ಡಿವೈಎಸ್‌ಪಿ ದೀಪಕ್, ಡಿವೈಎಸ್‌ಪಿ ಸಂಜಯ್‌ ಕುಮಾರ್, ಸಂಘದ ಕಾರ್ಯದರ್ಶಿ ವಿ.ಜಗನ್ನಾಥಯ್ಯ, ಎಂ.ಚಂದ್ರಶೇಖರಪ್ಪ, ಕೃಷ್ಣಗೌಡ, ಡಿ.ಜಿ.ನಾಗರಾಜ್, ತುಕಾರಾಂ ಉಪಸ್ಥಿತರಿದ್ದರು.

Retired-police-bhavana-pooje-at-Shimoga-DAR-Ground

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

Leave a Comment