ಐದು ಮಂದಿಗೆ 10 ವರ್ಷದ ಜೈಲು, ₹50,000 ದಂಡ, ಏನಿದು ಪ್ರಕರಣ?

 ಶಿವಮೊಗ್ಗ  LIVE 

ಶಿವಮೊಗ್ಗ: ಭದ್ರಾವತಿಯ ಗೊಂದಿ ಕೈಮರದ ಬಳಿ ದರೋಡೆಗೆ ಹೊಂಚು ಹಾಕುತ್ತಿದ್ದ ಆರೋಪ ಸಾಬೀತಾದ ಹಿನ್ನೆಲೆ ಐದು ಜನರಿಗೆ ಭದ್ರಾವತಿಯ ನ್ಯಾಯಾಲಯ 10 ವರ್ಷ ಜೈಲು (Jail) ಶಿಕ್ಷೆ, ₹50,000 ದಂಡ ವಿಧಿಸಿ ಆದೇಶಿಸಿದೆ.

ಇದನ್ನೂ ಓದಿ » ಶಿವಮೊಗ್ಗ ಪಾಲಿಕೆಯಿಂದ ಮಹತ್ವದ ಪ್ರಕಟಣೆ, 15 ದಿನದ ಗಡುವು, ತಪ್ಪಿದಲ್ಲಿ ಕಾನೂನು ಕ್ರಮ ಗ್ಯಾರಂಟಿ

2019ರ ಫೆಬ್ರವರಿಯಲ್ಲಿ ಮಾರಕಾಸ್ತ್ರ, ಖಾರದ ಪುಡಿ ಹಿಡಿದುಕೊಂಡು ವಾಹನಗಳ ದರೋಡೆಗೆ ಯತ್ನಿಸಿದ ಕುರಿತು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ನಡೆಸಿದ ಎಎಸ್‌ಐ ಹುಚ್ಚಪ್ಪ ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದರು.

ಆರೋಪ ಸಾಬೀತಾದ ಹಿನ್ನೆಲೆ ಆರೋಪಿಗಳಾದ ಟಿಪ್ಪುನಗರದ ಇಮ್ರಾನ್ ಷರೀಫ್ (33), ಹನೀಫುಲ್ಲಾ ಖಾನ್ (22), ಕಡೇಕಲ್ಲಿನ ಅಬೀದ್ ಖಾನ್ (35), ಮುಜಾಹಿದ್ (40), ನಸ್ರುಲ್ಲಾ(29)ಗೆ ನ್ಯಾಯಾಧಿಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರ ಪಿ.ರತ್ನಮ್ಮ ವಾದ ಮಂಡಿಸಿದ್ದರು.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment