ಅಡಿಕೆ ಸುಲಿಯಲು ಬಂದಿದ್ದ ಕಾರ್ಮಿಕನಿಂದ ಮಾಲೀಕರ ಬೊಲೆರೋ ವಾಹನ ಕಳ್ಳತನ

ತೀರ್ಥಹಳ್ಳಿ: ಅಡಿಕೆ ಸುಲಿಯುವ ಕೆಲಸಕ್ಕೆಂದು ಬಂದಿದ್ದ ಕಾರ್ಮಿಕನೊಬ್ಬ ಮಾಲೀಕರ ಬೊಲೆರೋ ವಾಹನವನ್ನೇ (Bolero Theft) ಕಳ್ಳತನ ಮಾಡಿ ಪರಾರಿಯಾಗಿದ್ದಾನೆ. ತೀರ್ಥಹಳ್ಳಿ ತಾಲೂಕು ಮೇಳಿಗೆ ಸಮೀಪದ ಮಂಡವಳ್ಳಿಯಲ್ಲಿ ಘಟನೆ ನಡೆದಿದೆ. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ನಂಜಪ್ಪ ಲೈಫ್‌ ಕೇರ್‌ನಲ್ಲಿ ಉಚಿತ ಸಮಾಲೋಚನೆ, 40% ರಿಯಾಯಿತಿ Nanjappa Hospital Advertisement ಇಲ್ಲಿ ಕ್ಲಿಕ್‌ ಮಾಡಿ ನೇರವಾಗಿ ಕರೆ ಮಾಡಿ ಹೆಸರು ನೋಂದಾಯಿಸಿ

ದೇವರಾಜ ಎಂಬವವರು ಅಡಿಕೆ ವ್ಯಾಪಾರಿಯಾಗಿದ್ದು, ಕೆಲಸಕ್ಕಾಗಿ ಹೊರ ಜಿಲ್ಲೆಗಳಿಂದ ಸುಮಾರು 40 ಕಾರ್ಮಿಕರನ್ನು ಕರೆತಂದಿದ್ದರು. ಜನವರಿ 6ರಂದು ಮಧ್ಯರಾತ್ರಿ ಮನೆಯ ಕಾಂಪೌಂಡ್ ಪಸಕ್ಕದಲ್ಲಿ ನಿಲ್ಲಿಸಿದ್ದ ಅಳಿಯ ಮನೋಜ್ ಅವರಿಗೆ ಸೇರಿದ ಮಹೇಂದ್ರ ಬೊಲೆರೋ ವಾಹನ ಕಳ್ಳತನವಾಗಿದೆ. ಎಲ್ಲೆಡೆ ವಿಚಾರಿಸಿದಾಗ ಅಡಿಕೆ ಸುಲಿಯುವ ಕೆಲಸಕ್ಕೆ ಬಂದಿದ್ದ ವಿಜಯನಗರ ಜಿಲ್ಲೆಯ ಸಿದ್ದಪ್ಪ ಕಳ್ಳತನ ಮಾಡಿದ್ದಾನೆ ಎಂದು ಗೊತ್ತಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

THIRTHAHALLI-NEWS-UPDATE.

HOME-LOAN-PRASHANTH.webp

ಘಟನೆ ಸಂಬಂಧ ದೇವರಾಜ ಅವರು ತೀರ್ಥಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ » ಸೂಡೂರು ಬಳಿ ಅಪಘಾತ, ಕೃಷಿ ಇಲಾಖೆ ನಿವೃತ್ತ ಅಧಿಕಾರಿ ಸಾವು, ಹೇಗಾಯ್ತು ಘಟನೆ?

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion

Leave a Comment