ಪ್ಲೇ ಸ್ಟೋರ್‌ನಿಂದ X, Grokಗಳನ್ನು ತೆಗೆದು ಹಾಕುವಂತೆ ಆಪಲ್‌, ಗೂಗಲ್‌ಗೆ ಪತ್ರ, ಕಾರಣವೇನು?

 ಶಿವಮೊಗ್ಗ  LIVE 

ಟೆಕ್‌ ನ್ಯೂಸ್‌: ಸೋಶಿಯಲ್ ಮೀಡಿಯಾ X (ಟ್ವಿಟರ್‌) ಮತ್ತು ಅದರ AI ಚಾಟ್‌ಬಾಟ್ Grok ಅನ್ನು ಆಪ್ ಸ್ಟೋರ್‌ಗಳಿಂದ ತೆಗೆದುಹಾಕುವಂತೆ ಅಮೆರಿಕದ ಸೆನೆಟರ್‌ಗಳು ಆಪಲ್ ಮತ್ತು ಗೂಗಲ್ ಸಂಸ್ಥೆಗಳಿಗೆ ಪತ್ರ ಬರೆದಿದ್ದಾರೆ. ಇದಕ್ಕೆ X ಸಂಸ್ಥೆಯ ಮಾಲೀಕ ಎಲಾನ್‌ ಮಸ್ಕ್‌ ತೀವ್ರವಾಗಿ ತಿರುಗೇಟು ನೀಡಿದ್ದಾರೆ.

ಅಮೆರಿಕ ಸೆನಟರ್‌ಗಳ ವಾದವೇನು?

X ಮತ್ತು Grok ಅಪ್ಲಿಕೇಶನ್‌ಗಳು ತಪ್ಪು ಮಾಹಿತಿ ಹರಡುತ್ತಿವೆ. ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುತ್ತಿವೆ ಎಂದು ಸೆನೆಟರ್‌ಗಳು ಆರೋಪಿಸಿದ್ದಾರೆ. ಈ ಹಿನ್ನೆಲೆ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ನಿಂದ ಇವುಗಳನ್ನು ನಿಷೇಧಿಸಬೇಕೆಂದು ಒತ್ತಾಯಿಸಿದ್ದಾರೆ.

HOME-LOAN-PRASHANTH.webp

ಇದನ್ನೂ ಓದಿ » ಸೂಡೂರು ಬಳಿ ಅಪಘಾತ, ಕೃಷಿ ಇಲಾಖೆ ನಿವೃತ್ತ ಅಧಿಕಾರಿ ಸಾವು, ಹೇಗಾಯ್ತು ಘಟನೆ?

ಮಸ್ಕ್‌ ತಿರುಗೇಟು ಏನು?

ಸೆನೆಟರ್‌ಗಳ ಈ ಕ್ರಮಕ್ಕೆ X ಮಾಲೀಕ ಎಲೋನ್ ಮಸ್ಕ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ‘ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆʼ ಎಂದು ಅವರು ಟೀಕಿಸಿದ್ದಾರೆ. ಅಮೆರಿಕದ ರಾಜಕೀಯ ವಲಯದಲ್ಲಿ ಈ ವಿಚಾರ ಚರ್ಚೆಗೆ ಕಾರಣವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಧ್ಯೆ ವೈಮನಸು ಮೂಡಿದಾಗಿನಿಂದ ಎಲಾನ್‌ ಮಸ್ಕ್‌ ಉದ್ಯಮಗಳ ಮೇಲೆ ಅಲ್ಲಿನ ಆಡಳಿತ ಕೆಂಗಣ್ಣು ಬೀರಿವೆ. ಅದರ ಮುಂದುವರೆದ ಭಾಗವಾಗಿ ಈ ಕ್ರಮ ಎಂದು ವರದಿಯಾಗಿದೆ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment