ಅಡಿಕೆ ಸುಲಿಯಲು ಬಂದಿದ್ದ ಕಾರ್ಮಿಕನಿಂದ ಮಾಲೀಕರ ಬೊಲೆರೋ ವಾಹನ ಕಳ್ಳತನ

ತೀರ್ಥಹಳ್ಳಿ: ಅಡಿಕೆ ಸುಲಿಯುವ ಕೆಲಸಕ್ಕೆಂದು ಬಂದಿದ್ದ ಕಾರ್ಮಿಕನೊಬ್ಬ ಮಾಲೀಕರ ಬೊಲೆರೋ ವಾಹನವನ್ನೇ (Bolero Theft) ಕಳ್ಳತನ ಮಾಡಿ ಪರಾರಿಯಾಗಿದ್ದಾನೆ. ತೀರ್ಥಹಳ್ಳಿ ತಾಲೂಕು ಮೇಳಿಗೆ ಸಮೀಪದ ಮಂಡವಳ್ಳಿಯಲ್ಲಿ ಘಟನೆ ನಡೆದಿದೆ.➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ದೇವರಾಜ ಎಂಬವವರು ಅಡಿಕೆ ವ್ಯಾಪಾರಿಯಾಗಿದ್ದು, ಕೆಲಸಕ್ಕಾಗಿ ಹೊರ ಜಿಲ್ಲೆಗಳಿಂದ ಸುಮಾರು 40 ಕಾರ್ಮಿಕರನ್ನು ಕರೆತಂದಿದ್ದರು. ಜನವರಿ 6ರಂದು ಮಧ್ಯರಾತ್ರಿ ಮನೆಯ ಕಾಂಪೌಂಡ್ ಪಸಕ್ಕದಲ್ಲಿ ನಿಲ್ಲಿಸಿದ್ದ ಅಳಿಯ ಮನೋಜ್ ಅವರಿಗೆ ಸೇರಿದ ಮಹೇಂದ್ರ ಬೊಲೆರೋ ವಾಹನ ಕಳ್ಳತನವಾಗಿದೆ. ಎಲ್ಲೆಡೆ ವಿಚಾರಿಸಿದಾಗ ಅಡಿಕೆ ಸುಲಿಯುವ ಕೆಲಸಕ್ಕೆ ಬಂದಿದ್ದ ವಿಜಯನಗರ ಜಿಲ್ಲೆಯ ಸಿದ್ದಪ್ಪ ಕಳ್ಳತನ ಮಾಡಿದ್ದಾನೆ ಎಂದು ಗೊತ್ತಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

THIRTHAHALLI-NEWS-UPDATE.

HOME-LOAN-PRASHANTH.webp

ಘಟನೆ ಸಂಬಂಧ ದೇವರಾಜ ಅವರು ತೀರ್ಥಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ » ಸೂಡೂರು ಬಳಿ ಅಪಘಾತ, ಕೃಷಿ ಇಲಾಖೆ ನಿವೃತ್ತ ಅಧಿಕಾರಿ ಸಾವು, ಹೇಗಾಯ್ತು ಘಟನೆ?

Leave a Comment