ಆನಂದಪುರ, ಜನವರಿ 20ರಂದು ಮಹಾರಥೋತ್ಸವ, ಮೂರು ದಿನ ವಿವಿಧ ಧಾರ್ಮಿಕ ಕಾರ್ಯಕ್ರಮ

 ಶಿವಮೊಗ್ಗ  LIVE 

ಆನಂದಪುರ: ಇಲ್ಲಿನ ಬಸವನ ಬೀದಿಯಲ್ಲಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವರ ಮಹಾರಥೋತ್ಸವ (Grand Rathotsava) ಜನವರಿ 20ರಂದು ನಡೆಯಲಿದೆ. ಈ ಹಿನ್ನೆಲೆ ದೇವಾಲಯದಲ್ಲಿ ಜ.19ರಿಂದ 21ರವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಯಾವ್ಯಾವ ದಿನ ಏನೇನು ಕಾರ್ಯಕ್ರಮ?

ಜನವರಿ 19ರ ಬೆಳಗ್ಗೆ10ಕ್ಕೆ ಗಣಪತಿ ಪೂಜೆ, ಪುಣ್ಯಾಹ, ಮಹಾಪೂಜೆ, ಸಂಜೆ ಯಾಗಶಾಲಾ ಪ್ರವೇಶ, ಪುಷೋತ್ಸವ ನಡೆಯಲಿದೆ.

ಜನವರಿ 20ರಂದು ಬೆಳಗ್ಗೆ 9ಕ್ಕೆ ಗಣಪತಿ ಪೂಜೆ, ಕಲಾತತ್ವ ಹವನ, ಮಧ್ಯಾಹ್ನ 12ಕ್ಕೆ ಮಹಾರಥೋತ್ಸವ, ಸಾರ್ವಜನಿಕ ಅನ್ನ ಸಂತರ್ಪಣೆ, ಸಂಜೆ 6ಕ್ಕೆ ಭಜನೆ, 7ಕ್ಕೆ ಶ್ರೀ ಸೀತಾರಾಮ ಕಲ್ಯಾಣೋತ್ಸವ, ಶ್ರೀರಾಮ ಪಟ್ಟಾಭಿಷೇಕ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.

Anandapura Sagara Graphics

ಜನವರಿ 21ರಂದು ಬೆಳಗ್ಗ 8ಕ್ಕೆ ಪುಣ್ಯಾಹ, ಅಧಿವಾಸ ಹೋಮ, ಉದಯ ಬಲಿ, ಬೆಳಗ್ಗೆ 9ಕ್ಕೆ ಇಕ್ಷಖಂಡ ಮತ್ತು ರಾಮತಾರಕ ಯಾಗ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಸಂಜೆ 5ಕ್ಕೆ ಚೆನ್ನಶೆಟ್ಟಿಕೊಪ್ಪ ಗ್ರಾಮದ ಚೆನ್ನಮ್ಮಾಜಿ ಜಾನಪದ ಕಲಾ ಸಂಘ ಮತ್ತು ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರು ಅಧಿಕ ಸಂಖ್ಯೆಯುಲ್ಲಿ ಪಾಲ್ಗೊಳ್ಳುವಂತೆ ದೇವಾಲಯ ಸಮಿತಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ » ದಿಢೀರ್‌ ಕಟ್‌ ಆಯ್ತು ಜಿಯೋ ಸಿಗ್ನಲ್‌, ಟವರ್‌ ಬಳಿ ಹೋದ ಸಿಬ್ಬಂದಿಗೆ ಕಾದಿತ್ತು ಶಾಕ್

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment