ಶಿವಮೊಗ್ಗ ಲೈವ್
ಶಿವಮೊಗ್ಗ: ಶ್ರೀರಾಂಪುರ ಗ್ರಾಮದ ರಿಲಯನ್ಸ್ ಜಿಯೋ ಟವರ್ಗೆ (Jio tower) ಅಳವಡಿಸಿದ್ದ ಲೀಥಿಯಂ ಬ್ಯಾಟರಿಗಳನ್ನು ಕಳ್ಳತನ ಮಾಡಲಾಗಿದೆ. 4 ಬ್ಯಾಟರಿಗಳು ಕಳುವಾಗಿದ್ದು ಅವುಗಳ ಮೌಲ್ಯ ₹3,36,088 ಎಂದು ಅಂದಾಜಿಸಲಾಗಿದೆ. (ಈ ಸುದ್ದಿಯನ್ನು ಇನ್ನು 33 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಶ್ರೀರಾಂಪುರದಲ್ಲಿ ಜಮೀನಿನಲ್ಲಿ ಟವರ್ ಅಳವಡಿಸಲಾಗಿದೆ. ಅದರ ಕಾರ್ಯನಿರ್ವಹಣೆಗಾಗಿ ಒಟ್ಟು 6 ಬ್ಯಾಟರಿಗಳನ್ನು ಇರಿಸಲಾಗಿತ್ತು. ಟವರ್ನ ಸಿಗ್ನಲ್ ಸ್ಥಗಿತಗೊಂಡ ಬಗ್ಗೆ ಅಲಾರಂ ಬಂದಿತ್ತು. ತಾಂತ್ರಿಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ, ಒಟ್ಟು 6 ಬ್ಯಾಟರಿಗಳ ಪೈಕಿ 4 ಬ್ಯಾಟರಿಗಳನ್ನು ಕಳ್ಳತನ ಮಾಡಿರುವುದು ಪತ್ತೆಯಾಗಿದೆ.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಮನೆಯೊಳಗೆ ನುಗ್ಗಿ ವೃದ್ಧೆಯ ಕೈಲಿದ್ದ ರೋಲ್ಡ್ ಗೋಲ್ಡ್ ಬಳೆ ಕದ್ದೊಯ್ದ ಕಳ್ಳರು..!
ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ
ಜಿಯೋ ಸಂಸ್ಥೆಯ ಎಸ್ಟೇಟ್ ಆಫೀಸರ್ ಹನುಮಂತ ಗೌಡ ಅವರು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಗೂಗಲ್ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ: