ವೈನ್‌ ಶಾಪ್‌ನಲ್ಲಿ ಬಿಯರ್‌ ಬಾಟಲಿಯಿಂದ ಯುವಕನ ತಲೆಗೆ ಹೊಡೆದ ವ್ಯಕ್ತಿ, ಕಾರಣವೇನು?

 ಶಿವಮೊಗ್ಗ  LIVE 

ಶಿವಮೊಗ್ಗ: ಕುಡಿಯಲು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಬಿಯರ್ ಬಾಟಲಿಯಿಂದ (Bottle) ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಲಾಗಿದೆ. ಗೋಪಾಳ ಬಡಾವಣೆಯ ನಿವಾಸಿ ಹೆಚ್.ಜಿ. ಕಿರಣ್ (32) ಹಲ್ಲೆಗೊಳಗಾದವರು.

ಶಿವಮೊಗ್ಗ ಎಪಿಎಂಸಿ ಸಮೀಪ ಇರುವ ವೈನ್‌ ಶಾಪ್‌ಗೆ ಕಿರಣ್ ತಮ್ಮ ಸ್ನೇಹಿತರ ಜೊತೆಗೆ ತೆರಳಿದ್ದರು. ಈ ವೇಳೆ ಅಲ್ಲಿಗೆ ಬಂದ ವ್ಯಕ್ತಿ, ಕಿರಣ್ ಅವರ ಬಳಿ ಮದ್ಯ ಸೇವಿಸಲು ಹಣ ಕೇಳಿದ್ದಾನೆ. ಕಿರಣ್ ಹಣ ನೀಡಲು ನಿರಾಕರಿಸಿದಾಗ, ಅವಾಚ್ಯವಾಗಿ ಬೈದು ಪಕ್ಕದಲ್ಲೇ ಇದ್ದ ಬಿಯರ್ ಬಾಟಲಿಯಿಂದ ಕಿರಣ್ ಅವರ ತಲೆಗೆ ಹೊಡೆದು ಗಾಯಗೊಳಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಇದೇ ವೇಳೆ ಕಿರಣ್‌ಗೆ ಜೀವ ಬೆದರಿಕೆ ಒಡ್ಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆ ಸಂಬಂಧ ವಿನೋಬನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಶರಾವತಿ ಹಿನ್ನೀರಿನಲ್ಲಿ ಈಜಲು ಹೋಗಿದ್ದ ಡಾಕ್ಟರ್‌ ಸಾವು, ಹೇಗಾಯ್ತು ಘಟನೆ?

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment