ಶಬರಿಮಲೈ ಸಮೀಪ ಶಿವಮೊಗ್ಗ, ಭದ್ರಾವತಿ ಮಾಲಾಧಾರಿಗಳಿಂದ ದಿಢೀರ್‌ ಪ್ರತಿಭಟನೆ, ಕಾರಣವೇನು?

 ಶಿವಮೊಗ್ಗ  LIVE 

ಶಿವಮೊಗ್ಗ: ಭದ್ರಾವತಿ, ಶಿವಮೊಗ್ಗದಿಂದ ಶಬರಿಮಲೈಗೆ (Sabarimala Row) ತೆರಳಿರುವ ಮಾಲಾಧಾರಿಗಳು ದಿಢೀರ್‌ ಪ್ರತಿಭಟನೆ ನಡೆಸಿದರು. ಕೇರಳ ಸರ್ಕಾರ, ಅಲ್ಲಿಯ ಪೊಲೀಸರು ವಿರುದ್ಧ ಘೋಷಣೆಗಳನ್ನು ಕೂಗಿದರು.

ಕೇರಳದ ಕೊಟ್ಟಾಯಂ ಜಿಲ್ಲೆಯ ಏರುಮೇಲಿ ಎಂಬಲ್ಲಿ ಕರ್ನಾಟಕದ ಮಾಲಾಧಾರಿಗಳು ಪ್ರತಿಭಟನೆ ಆರಂಭಿಸಿದ್ದಾರೆ.

ಪ್ರತಿಭಟನೆಗೆ ಕಾರಣವೇನು?

ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿರುವ ವಾಹನಗಳನ್ನು ಏರುಮೇಲಿ ಎಂಬಲ್ಲಿ ತಡೆದು ನಿಲ್ಲಿಸಲಾಗುತ್ತಿದೆ. ಅಲ್ಲಿಂದ ಶಬರಿಮಲೈಗೆ 45 ಕಿ.ಮೀ ದೂರವಿದೆ. ಹಾಗಾಗಿ ಏರುಮೇಲಿಯ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಘೋಷಣೆಗಳನ್ನು ಕೂಗುತ್ತಿದ್ದಾರೆ.

ಕೇರಳ ಸರ್ಕಾರ ಕರ್ನಾಟಕದ ಭಕ್ತರಿಗೆ ಅನ್ಯಾಯ ಮಾಡುತ್ತಿದೆ. ಬೆಳಗ್ಗೆ 10 ಗಂಟೆಯಿಂದ ಕರ್ನಾಟಕದ ವಾಹನಗಳನ್ನು ಮಾತ್ರ ತಡೆ ಹಿಡಿದಿದೆ. ಆದ್ದರಿಂದ ಕರ್ನಾಟಕ ಮುಖ್ಯಮಂತ್ರಿ ಅವರು ಕೇರಳ ಸರ್ಕಾರದ ಜೊತೆ ಮಾತನಾಡಬೇಕು. ಕರ್ನಾಟಕದ ಭಕ್ತರ ಯಾತ್ರೆಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ನಾವು ಕೇರಳದಲ್ಲಿ ಅತಂತ್ರರಾಗಿದ್ದೇವೆ.ಶಿವಮೊಗ್ಗ ಜಿಲ್ಲೆಯ ಮಾಲಾಧಾರಿ
Shabraimali-Devotees-protest-in-Kerala

ಇದನ್ನೂ ಓದಿ » ಶಿವಮೊಗ್ಗ ಜಿಲ್ಲಾಧಿಕಾರಿಗೆ ಸೈಬರ್‌ ವಂಚಕರ ಕಾಟ, ಆಗಿದ್ದೇನು? ಪ್ರಕಟಣೆಯಲ್ಲಿ ಡಿಸಿ ಹೇಳಿದ್ದೇನು?

ಬೆಳಗ್ಗೆ 10 ಗಂಟೆಯಿಂದ ರಸ್ತೆಯಲಿದ್ದೇವೆ. ಭದ್ರಾವತಿಯಿಂದ ಇಲ್ಲಿಗೆ ಬಂದಿದ್ದೇವೆ. ನಮ್ಮೊಂದಿಗೆ ಮಕ್ಕಳು ಕೂಡ ಮಾಲೆ ಧರಿಸಿ ಬಂದಿದ್ದಾರೆ. ಕೂಡಲೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅವರು ಈ ಸಂಬಂಧ ಕ್ರಮ ಕೈಗೊಳ್ಳಬೇಕು. ಉಮೇಶ್‌, ಭದ್ರಾವತಿ ಭಕ್ತರು
shabarimali protest

ಭಕ್ತರ ಆರೋಪ ಏನು?

ಕರ್ನಾಟಕ, ಆಂಧ್ರ, ತೆಲಂಗಾಣ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸುವ ಮಾಲಾಧಾರಿಗಳನ್ನು ಏರುಮೇಲಿಯಲ್ಲಿ ತಡೆದು ನಿಲ್ಲಿಸಲಾಗುತ್ತದೆ. ಕನಿಷ್ಠ ಎರಡು ದಿನ ಅಲ್ಲಿಯೇ ವಾಹನಗಳನ್ನು ತಡೆ ಹಿಡಿಯಲಾಗುತ್ತಿದೆ. ದುಬಾರಿ ಪಾರ್ಕಿಂಗ್‌ ಚಾರ್ಜ್‌, ಹೊಟೇಲ್‌ಗಳಿಗೆ ಅನುಕೂಲ ಮಾಡಿಕೊಡಲು ಹೀಗೆ ಮಾಡಲಾಗುತ್ತಿದೆ ಎಂದು ಮಾಲಾಧಾರಿಗಳು ಆಪಾದಿಸಿದ್ದಾರೆ. ಗುರುಸ್ವಾಮಿ ಕಣ್ಣನ್‌, ಜೀವನ್‌, ಕಿರಣ್‌, ವೀರಸ್ವಾಮಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.

shabarimali protest

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment