ಶಿವಮೊಗ್ಗ: ಮಾಚೇನಹಳ್ಳಿಯ ಶಿಮುಲ್ ಡೇರಿ ಎದುರು ಬಿ.ಹೆಚ್.ರಸ್ತೆಯ ಚತುಷ್ಪಥ ಕಾಮಗಾರಿಯ ವೇಳೆ ಭೂಕುಸಿತದಿಂದ ಸರ್ವಿಸ್ ರಸ್ತೆಗೆ ಹಾನಿಯಾಗಿದೆ. ಅಲ್ಲಿ ವಾಹನ ಸಂಚಾರದ ಒತ್ತಡ ತಡೆಯಲು ಅಲ್ಲಿ ಏಕಮುಖ ಸಂಚಾರಕ್ಕೆ ಜಿಲ್ಲಾಡಳಿತ ಆದೇಶಿಸಿದೆ. (heavy vehicle)
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಇದನ್ನು ಓದಿ – ಗೋಬಿ ತಿಂದು ವಾಪಸ್ ತೆರಳುವಾಗ ಗೊಂದಿಚಟ್ನಹಳ್ಳಿ ಬಳಿ ದುರ್ಘಟನೆ, ಯುವಕ ಸಾವು, ಆಗಿದ್ದೇನು?
ಶಿಮುಲ್ ಡೇರಿ ಎದುರು ಚತುಷ್ಪಥ ರಸ್ತೆ ಕಾಮಗಾರಿ ವೇಳೆ ಆಗಿರುವ ಭೂ ಕುಸಿತವಾಗಿದೆ. ಜಿಲ್ಲಾ ರಕ್ಷಣಾಧಿಕಾರಿ ಬಿ.ನಿಖಿಲ್ ಅವರೊಂದಿಗೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದ್ದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸಿ ಎಸ್ಪಿ ನೀಡಿದ ವರದಿ ಆಧರಿಸಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಈ ಆದೇಶ ಮಾಡಿದ್ದಾರೆ.
ಭಾರಿ ವಾಹನ ಸಂಚಾರ ನಿಷೇಧ
ಶಿಮುಲ್ ಡೇರಿ ಎದುರಿನ ಸರ್ವಿಸ್ ರಸ್ತೆಯಲ್ಲಿ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿಷೇಧ ವಿಧಿಸಿದ್ದು, ಶಿವಮೊಗ್ಗ, ಭದ್ರಾವತಿ, ಬೆಂಗಳೂರಿಗೆ ತೆರಳುವ ಮತ್ತು ಭದ್ರಾವತಿಯಿಂದ ಶಿವಮೊಗ್ಗಕ್ಕೆ ಬರುವ ಲಘು ವಾಹನಗಳಿಗೆ ಮಾತ್ರ ಸದರಿ ಸರ್ವಿಸ್ ರಸ್ತೆ ಬಳಸಲು ಅವಕಾಶ ನೀಡಲಾಗಿದೆ.

ಭದ್ರಾವತಿಯಿಂದ ಶಿವಮೊಗ್ಗಕ್ಕೆ ಬರುವ ಭಾರಿ ವಾಹನಗಳು ಭದ್ರಾವತಿಯ ಐಬಿ ವೃತ್ತದಿಂದ (ಮಿಲ್ಟಿ ಕ್ಯಾಂಪ್), ಹಿರಿಯೂರು, ಹುಣಸೆಕಟ್ಟೆ ಜಂಕ್ಷನ್, ಲಕ್ಕಿನಕೊಪ್ಪ ಜಂಕ್ಷನ್, ಶಿವಮೊಗ್ಗ ವಿಮಾನ ನಿಲ್ದಾಣ ಮಾರ್ಗದ ಮೂಲಕ ಎಂಆರ್‌ಎಸ್ ವೃತ್ತಕ್ಕೆ ಬರಲಿವೆ.
ಶಿವಮೊಗ್ಗದಿಂದ ಭದ್ರಾವತಿಗೆ ಹೋಗುವ ಭಾರಿ ಗಾತ್ರದ ವಾಹನಗಳು ಎಂಆರ್‌ಎಸ್ ವೃತ್ತ, ಶಿವಮೊಗ್ಗ ವಿಮಾನ ನಿಲ್ದಾಣ, ಲಕ್ಕಿನಕೊಪ್ಪ ಜಂಕ್ಷನ್, ಹುಣಸೆಕಟ್ಟೆ ಜಂಕ್ಷನ್, ಹಿರಿಯೂರು, ಭದ್ರಾವತಿ ಐಬಿ ವೃತ್ತದಿಂದ ಸಂಚರಿಸಬೇಕಿದೆ. ಭದ್ರಾವತಿಯಿಂದ ಶಿವಮೊಗ್ಗಕ್ಕೆ ಬರುವ ಲಘು ಗಾತ್ರದ ವಾಹನಗಳು ಭದ್ರಾವತಿಯ ಟೈಮ್ಸ್ ಇಂಟರ್‌ನ್ಯಾಶನಲ್ ಶಾಲೆ, ಶಿವರಾಮ ನಗರ, ಮಾಚೇನಹಳ್ಳಿ ಕೈಗಾರಿಕಾ ವಸಾಹತು, ಮಲವಗೊಪ್ಪ ಮೂಲಕ ಎಂಆರ್‌ಎಸ್ ವೃತ್ತ ಮಾರ್ಗದಲ್ಲಿ ಸಂಚರಿಸಬಹುದು ಎಂದು ಜಿಲ್ಲಾಡಳಿತದ ಆದೇಶದಲ್ಲಿ ತಿಳಿಸಲಾಗಿದೆ.
LATEST NEWS
- ಶಿವಮೊಗ್ಗದಲ್ಲಿ ಹಾಲಿನ ಪ್ಯಾಕೆಟ್ ಕಳ್ಳರ ಹಾವಳಿ, ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ

- KFD ಸೋಂಕಿಗೆ ಮೊದಲ ಬಲಿ, ತೀರ್ಥಹಳ್ಳಿಯ ಯುವಕ ಮಣಿಪಾಲದಲ್ಲಿ ಸಾವು

- ಶಿವಮೊಗ್ಗ ಸಮೀಪ ಧಗಧಗ ಹೊತ್ತಿ ಉರಿದ ಸ್ಲೀಪರ್ ಬಸ್ಸು, ಅದೃಷ್ಟವಶಾತ್ ಪ್ರಯಾಣಿಕರು ಪಾರು, ಆಗಿದ್ದೇನು?

- ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? | 27 ಜನವರಿ 2026 | ಅಡಿಕೆ ಧಾರಣೆ

- ಶಿವಮೊಗ್ಗದ ವಸತಿ ಶಾಲೆಯ 17 ವಿದ್ಯಾರ್ಥಿನಿಯರು ಮೆಗ್ಗಾನ್ ಆಸ್ಪತ್ರೆಗೆ ದಾಖಲು, ಜಿಲ್ಲಾಧಿಕಾರಿ, ಸಿಇಒ ಭೇಟಿ

About The Editor
ನಿತಿನ್ ಆರ್.ಕೈದೊಟ್ಲು





