ಮಾಚೇನಹಳ್ಳಿಯಲ್ಲಿ ಒನ್‌ ವೇ ಸಂಚಾರಕ್ಕೆ ಜಿಲ್ಲಾಧಿಕಾರಿ ಆದೇಶ, ಕಾರಣವೇನು?

ಶಿವಮೊಗ್ಗ: ಮಾಚೇನಹಳ್ಳಿಯ ಶಿಮುಲ್ ಡೇರಿ ಎದುರು ಬಿ.ಹೆಚ್.ರಸ್ತೆಯ ಚತುಷ್ಪಥ ಕಾಮಗಾರಿಯ ವೇಳೆ ಭೂಕುಸಿತದಿಂದ ಸರ್ವಿಸ್ ರಸ್ತೆಗೆ ಹಾನಿಯಾಗಿದೆ. ಅಲ್ಲಿ ವಾಹನ ಸಂಚಾರದ ಒತ್ತಡ ತಡೆಯಲು ಅಲ್ಲಿ ಏಕಮುಖ ಸಂಚಾರಕ್ಕೆ ಜಿಲ್ಲಾಡಳಿತ ಆದೇಶಿಸಿದೆ. (heavy vehicle) (ಈ ಸುದ್ದಿಯನ್ನು ಇನ್ನು 70 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಇದನ್ನು ಓದಿ – ಗೋಬಿ ತಿಂದು ವಾಪಸ್‌ ತೆರಳುವಾಗ ಗೊಂದಿಚಟ್ನಹಳ್ಳಿ ಬಳಿ ದುರ್ಘಟನೆ, ಯುವಕ ಸಾವು, ಆಗಿದ್ದೇನು?

Dc-Visit-machenahalli-in-Shimoga

ಶಿಮುಲ್ ಡೇರಿ ಎದುರು ಚತುಷ್ಪಥ ರಸ್ತೆ ಕಾಮಗಾರಿ ವೇಳೆ ಆಗಿರುವ ಭೂ ಕುಸಿತವಾಗಿದೆ. ಜಿಲ್ಲಾ ರಕ್ಷಣಾಧಿಕಾರಿ ಬಿ.ನಿಖಿಲ್‌ ಅವರೊಂದಿಗೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದ್ದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸಿ ಎಸ್ಪಿ ನೀಡಿದ ವರದಿ ಆಧರಿಸಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಈ ಆದೇಶ ಮಾಡಿದ್ದಾರೆ.

ಭಾರಿ ವಾಹನ ಸಂಚಾರ ನಿಷೇಧ

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ

ಶಿಮುಲ್ ಡೇರಿ ಎದುರಿನ ಸರ್ವಿಸ್ ರಸ್ತೆಯಲ್ಲಿ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿಷೇಧ ವಿಧಿಸಿದ್ದು, ಶಿವಮೊಗ್ಗ, ಭದ್ರಾವತಿ, ಬೆಂಗಳೂರಿಗೆ ತೆರಳುವ ಮತ್ತು ಭದ್ರಾವತಿಯಿಂದ ಶಿವಮೊಗ್ಗಕ್ಕೆ ಬರುವ ಲಘು ವಾಹನಗಳಿಗೆ ಮಾತ್ರ ಸದರಿ ಸರ್ವಿಸ್ ರಸ್ತೆ ಬಳಸಲು ಅವಕಾಶ ನೀಡಲಾಗಿದೆ.

Dc-Visit-machenahalli-in-Shimoga

ಭದ್ರಾವತಿಯಿಂದ ಶಿವಮೊಗ್ಗಕ್ಕೆ ಬರುವ ಭಾರಿ ವಾಹನಗಳು ಭದ್ರಾವತಿಯ ಐಬಿ ವೃತ್ತದಿಂದ (ಮಿಲ್ಟಿ ಕ್ಯಾಂಪ್), ಹಿರಿಯೂರು, ಹುಣಸೆಕಟ್ಟೆ ಜಂಕ್ಷನ್, ಲಕ್ಕಿನಕೊಪ್ಪ ಜಂಕ್ಷನ್, ಶಿವಮೊಗ್ಗ ವಿಮಾನ ನಿಲ್ದಾಣ ಮಾರ್ಗದ ಮೂಲಕ ಎಂಆರ್‌ಎಸ್ ವೃತ್ತಕ್ಕೆ ಬರಲಿವೆ.

ಶಿವಮೊಗ್ಗದಿಂದ ಭದ್ರಾವತಿಗೆ ಹೋಗುವ ಭಾರಿ ಗಾತ್ರದ ವಾಹನಗಳು ಎಂಆರ್‌ಎಸ್ ವೃತ್ತ, ಶಿವಮೊಗ್ಗ ವಿಮಾನ ನಿಲ್ದಾಣ, ಲಕ್ಕಿನಕೊಪ್ಪ ಜಂಕ್ಷನ್, ಹುಣಸೆಕಟ್ಟೆ ಜಂಕ್ಷನ್, ಹಿರಿಯೂರು, ಭದ್ರಾವತಿ ಐಬಿ ವೃತ್ತದಿಂದ ಸಂಚರಿಸಬೇಕಿದೆ. ಭದ್ರಾವತಿಯಿಂದ ಶಿವಮೊಗ್ಗಕ್ಕೆ ಬರುವ ಲಘು ಗಾತ್ರದ ವಾಹನಗಳು ಭದ್ರಾವತಿಯ ಟೈಮ್ಸ್ ಇಂಟರ್‌ನ್ಯಾಶನಲ್ ಶಾಲೆ, ಶಿವರಾಮ ನಗರ, ಮಾಚೇನಹಳ್ಳಿ ಕೈಗಾರಿಕಾ ವಸಾಹತು, ಮಲವಗೊಪ್ಪ ಮೂಲಕ ಎಂಆರ್‌ಎಸ್ ವೃತ್ತ ಮಾರ್ಗದಲ್ಲಿ ಸಂಚರಿಸಬಹುದು ಎಂದು ಜಿಲ್ಲಾಡಳಿತದ ಆದೇಶದಲ್ಲಿ ತಿಳಿಸಲಾಗಿದೆ.

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Leave a Comment