ಶಿವಮೊಗ್ಗ: ಮನೆ ಮುಂಭಾಗ ಚೀಲದಲ್ಲಿ ಇಟ್ಟಿದ್ದ ಲಕ್ಷಾಂತರ ಮೌಲ್ಯದ ಒಣ ಅಡಿಕೆಯನ್ನು (areca nut) ಕಳ್ಳರು ಹೊತ್ತೊಯ್ದಿದ್ದಾರೆ. ಕುಟುಂಬದವರೆಲ್ಲ ಮನೆಯ ಒಳಗೆ ಮಲಗಿದ್ದ ಸಮಯದಲ್ಲೆ ಕೃತ್ಯ ನಡೆದಿದೆ. ಪುರದಾಳು ಸಮೀಪದ ಹನುಮಂತಾಪುರ ಗ್ರಾಮದಲ್ಲಿ ಘಟನೆ ಸಂಭವಿಸಿದೆ.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಪ್ರಶಾಂತ್ ಎಂಬುವವರು 3 ಎಕರೆ ತೋಟದಲ್ಲಿ ಬೆಳೆದ ಅಡಿಕೆಯನ್ನು ಕಟಾವು ಮಾಡಿ, ಒಣಗಿಸಿ ಮಾರಾಟ ಮಾಡಲು ಸಿದ್ಧಪಡಿಸಿದ್ದರು. ಒಟ್ಟು 25 ಗೋಣಿ ಚೀಲಗಳಲ್ಲಿ ಒಣ ಅಡಿಕೆಯನ್ನು ತುಂಬಿ ಹನುಮಂತಾಪುರದ ತಮ್ಮ ಮನೆಯ ಮುಂಭಾಗ ಇಟ್ಟಿದ್ದರು. ಜನವರಿ 17ರ ರಾತ್ರಿ ಅಡಿಕೆ ಚೀಲಗಳು ಅಲ್ಲಿಯೇ ಇದ್ದವು. ಮರುದಿನ ಬೆಳಗ್ಗೆ 5 ಗಂಟೆಗೆ ಎದ್ದು ನೋಡಿದಾಗ 4 ಗೋಣಿ ಚೀಲಗಳು ನಾಪತ್ತೆಯಾಗಿದ್ದವು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದನ್ನೂ ಓದಿ – ಮಾಚೇನಹಳ್ಳಿಯಲ್ಲಿ ಒನ್ ವೇ ಸಂಚಾರಕ್ಕೆ ಜಿಲ್ಲಾಧಿಕಾರಿ ಆದೇಶ, ಕಾರಣವೇನು?
ಅಂದಾಜು ₹2,00,000 ಮೌಲ್ಯದ 3 ಕ್ವಿಂಟಾಲ್ ಒಣ ಅಡಿಕೆಯ ಕಳುವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LATEST NEWS
- ಶಿವಮೊಗ್ಗದಲ್ಲಿ ಹಾಲಿನ ಪ್ಯಾಕೆಟ್ ಕಳ್ಳರ ಹಾವಳಿ, ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ

- KFD ಸೋಂಕಿಗೆ ಮೊದಲ ಬಲಿ, ತೀರ್ಥಹಳ್ಳಿಯ ಯುವಕ ಮಣಿಪಾಲದಲ್ಲಿ ಸಾವು

- ಶಿವಮೊಗ್ಗ ಸಮೀಪ ಧಗಧಗ ಹೊತ್ತಿ ಉರಿದ ಸ್ಲೀಪರ್ ಬಸ್ಸು, ಅದೃಷ್ಟವಶಾತ್ ಪ್ರಯಾಣಿಕರು ಪಾರು, ಆಗಿದ್ದೇನು?

- ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? | 27 ಜನವರಿ 2026 | ಅಡಿಕೆ ಧಾರಣೆ

- ಶಿವಮೊಗ್ಗದ ವಸತಿ ಶಾಲೆಯ 17 ವಿದ್ಯಾರ್ಥಿನಿಯರು ಮೆಗ್ಗಾನ್ ಆಸ್ಪತ್ರೆಗೆ ದಾಖಲು, ಜಿಲ್ಲಾಧಿಕಾರಿ, ಸಿಇಒ ಭೇಟಿ

About The Editor
ನಿತಿನ್ ಆರ್.ಕೈದೊಟ್ಲು






