ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಂಕರಘಟ್ಟ: ಕಳೆದ ವಾರಾಂತ್ಯದಲ್ಲಿ ಮುಕ್ತಾಯಗೊಂಡ ಬಿಆರ್ಪಿ ಲೆಜೆಂಡ್ಸ್ ಆಶ್ರಯದಲ್ಲಿ ನಡೆದ ಮೂರು ದಿನಗಳ 40 ವರ್ಷ ಮೇಲ್ಪಟ್ಟವರ ಕ್ರಿಕೆಟ್ (Cricket) ಪಂದ್ಯಾವಳಿಯು 80-90ರ ದಶಕದ ಹಳೆಯ ಸ್ನೇಹಿತರ ಭಾವನಾತ್ಮಕ ಸಮ್ಮಿಲನಕ್ಕೆ ಸಾಕ್ಷಿಯಾಯಿತು.
ರಾಜ್ಯದ ನಾನಾ ಭಾಗಗಳಲ್ಲಿ ನೆಲೆಸಿರುವ ಅಂದಿನ ಚಿಣ್ಣರು, ಹುಡುಗಾಟಿಕೆಯ ದಿನಗಳನ್ನು ಮೆಲುಕು ಹಾಕುತ್ತಾ ಕ್ರಿಕೆಟ್ ಆಡುವ ಮೂಲಕ ತಮ್ಮಲ್ಲಿ ಇನ್ನೂ ಕ್ರೀಡಾ ಸ್ಫೂರ್ತಿ ಮತ್ತು ಚೈತನ್ಯದ ಚಿಲುಮೆ ಹಸಿರಾಗಿರುವುದನ್ನು ಸಾಬೀತುಪಡಿಸಿದರು. ಕಳೆದ 4 ವರ್ಷದಿಂದ ಈ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗುತ್ತಿದೆ.

ಕುವೆಂಪು ವಿಶ್ವವಿದ್ಯಾಲಯದ ಡಾ. ಧರಣಿಕುಮಾರ್, ಸಿದ್ದರಾಮ, ಗಣೇಶ್, ಬಸವರಾಜು (ಬಬ್ಲೂ), ಮತ್ತು ಸ್ಥಳೀಯರಾದ ಬಿ. ಟಿ. ಮಂಜು, ಪ್ರಭಾಕರ್, ಅಜೀ಼ಜ಼್, ಗಿರೀಶ್, ಮಹೇಶ್, ಗುರು, ಸೇರಿದಂತೆ 200ಕ್ಕೂ ಹೆಚ್ಚು ಮಂದಿ ಸ್ನೇಹಿತರ ಬಳಗ ನೆರೆದಿತ್ತು.
ಇದನ್ನೂ ಓದಿ – ನೆಹರು ರಸ್ತೆಯ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರ, ಯಾರೆಲ್ಲ ಬರ್ತಾರೆ? ಏನೆಲ್ಲ ಚರ್ಚೆಯಾಗಲಿದೆ?
LATEST NEWS
- ಕೂಡ್ಲಿಯಲ್ಲಿ ಸಾವಿರ ಸಾವಿರ ಜನರಿಂದ ಪುಣ್ಯ ಸ್ನಾನ, ಹೇಗಿದೆ ಈ ಬಾರಿ ಜಾತ್ರೆ?

- ಶಿವಮೊಗ್ಗದಲ್ಲಿ ಯುಗಾದಿ ಚಂದ್ರ ದರ್ಶನ, ಜನರಿಂದ ಪೂಜೆ, ಶುಭಾಶಯ ವಿನಿಮಯ

- ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್ | 20 ಮಾರ್ಚ್ 2026 | ಅಡಿಕೆ ಧಾರಣೆ

- ಕಾರು, ಬೈಕ್ ಡಿಕ್ಕಿ, ಯುವಕ ದಾರುಣ ಸಾವು, ಹೇಗಾಯ್ತು ಘಟನೆ?

- ಉಷಾ ನರ್ಸಿಂಗ್ ಹೋಂ ಸಿಗ್ನಲ್ನಲ್ಲಿನ ಅಪಘಾತ, ಸಿಸಿಟಿವಿ ದೃಶ್ಯ ಲಭ್ಯ, ಇಲ್ಲಿದೆ ಡಿಕ್ಕಿಯ ಕಂಪ್ಲೀಟ್ ಡಿಟೇಲ್ಸ್

About The Editor
ನಿತಿನ್ ಆರ್.ಕೈದೊಟ್ಲು















