ಶಿವಮೊಗ್ಗದಲ್ಲಿ ಡಿ.ಕೆ.ಶಿವಕುಮಾರ್‌, ಕಾರ್ಯಕರ್ತರ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಗರಕ್ಕೆ ಆಗಮಿಸಿದ್ದರೆ. ಅವರ ಹೆಲಿಕಾಪ್ಟರ್ ಲ್ಯಾಂಡ್ ಆಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ‘ಮುಂದಿನ ಸಿಎಂ ಡಿಕೆಶಿ‘ (Next CM DKS) ಎಂಬ ಘೋಷಣೆಗಳನ್ನು ಕೂಗಿದರು. ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು, ಮುಖಂಡರು ಸುತ್ತವರಿಸಿದ್ದರಿಂದ ಅವರನ್ನು ನಿರ್ವಹಿಸಲು ಪೊಲೀಸರು ಹೆಣಗಾಡಿದರು.

ಮುಖ್ಯಮಂತ್ರಿ ಆಗುವ ವಿಚಾರದ ಬಗ್ಗೆ ಕಾಲವೇ ಉತ್ತರ ನೀಡಲಿದೆ. ನಮ್ಮ ಹಾಗೂ ಕಾರ್ಯಕರ್ತರ ಪ್ರಯತ್ನದಿಂದಾಗಿಯೇ ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಈ ವಿಚಾರವಾಗಿ ಪ್ರಸ್ತುತ ನಾನೇನೂ ಉತ್ತರಿಸಲ್ಲ. ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.- ಡಿ.ಕೆ.ಶಿವಕುಮಾ‌ರ್, ಡಿಸಿಎಂ

ಮನರೇಗಾ ಜಾಹೀರಾತು, ತಪ್ಪೇನಿದೆ?

dk-Shivakumar-in-Shivamogga-helipad

ಜನರಿಗೆ ಮನವರಿಕೆ ಮಾಡುವ ಉದ್ದೇಶದಿಂದ ಜಾಹೀರಾತು ನೀಡಲಾಗಿದೆ. ಅದನ್ನು ನಮ್ಮ ಶೈಲಿಯಲ್ಲಿ ತಿಳಿಸಲು ಯತ್ನಿಸಿದ್ದೇವೆ. ಅದರಲ್ಲಿ ತಪ್ಪೇನಿದೆ?’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಪ್ರಶ್ನಿಸಿದರು.

dk-Shivakumar-in-Shivamogga-helipad

ಮನರೇಗಾ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ. ಆದರೆ ಕೇಂದ್ರ ಸರಕಾರ ಗಾಂಧೀಜಿ ಅವರ ಹೆಸರು ಬದಲಿಸಿದರು. ಈ ಯೋಜನೆಗೆ ಕೇಂದ್ರದಿಂದ ಅನುದಾನ ನೀಡಬೇಕೇ ವಿನಾ ರಾಜ್ಯ ನೀಡಲು ಬರುವುದಿಲ್ಲ. ಬಡ ಜನರ ಬದುಕು ಸುಸ್ಥಿರಗೊಳಿಸುವ ಯೋಜನೆಯ ಹೆಸರು ಮಾತ್ರವಲ್ಲ, ಅದರ ಮೇಲೆ ಪಂಚಾಯಿತಿಗಳಿಗೆ ಇದ್ದ ಹಿಡಿತವನ್ನೂ ತಪ್ಪಿಸಲಾಗಿದೆ. ಈ ಕುರಿತು ಕೇಳಿದ್ದಕ್ಕೆ ಮಾರ್ಗಸೂಚಿ ನೀಡಿದೆ. ಆದರೆ, ಅದರಲ್ಲಿ ಜೀವವೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ – ಹಾರನ್‌ ವಿಚಾರವಾಗಿ ಕಿರಿಕ್‌, ವ್ಯಕ್ತಿ ಮೇಲೆ ಹಲ್ಲೆ, ದವಡೆ ಹಲ್ಲು ಕಟ್‌, ಆಗಿದ್ದೇನು?

ಯತೀಂದ್ರ ಹಸ್ತಕ್ಷೇಪ ಎನ್ನಲಾಗದು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರ ಹಸ್ತಕ್ಷೇಪದಿಂದಾಗಿ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ರಾಜೀನಾಮೆ ಪತ್ರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿ, ಜಾರ್ಜ್ ಹಿರಿಯರು, ಸ್ವಾಭಿಮಾನದಿಂದ ಕೆಲಸ ಮಾಡುವವರು. ಪ್ರತಿಪಕ್ಷದವರ ಕೆಲಸವೇ ಆರೋಪಿಸುವುದು. ಕೆಲವೊಮ್ಮೆ ಪಕ್ಷದ ಕಾರ್ಯಕರ್ತರು ಕೇಳಿಕೊಂಡಾಗ ಯತೀಂದ್ರ ಅವರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿರಬಹುದು. ಅದನ್ನು ಹಸ್ತಕ್ಷೇಪ ಎನ್ನಲಾಗದು ಎಂದರು.

Total-Readers-of-Shivamogga-Live

Leave a Comment