ಸಾಗರದ ಮಾರಿಕಾಂಬ ದೇವಿ ಜಾತ್ರೆ ಆರಂಭ, ತವರು ಮನೆಯಲ್ಲಿ ದೇವಿಯ ದರ್ಶನ, ಹೇಗಿತ್ತು ವೈಭವ?

ಸಾಗರ: ಇತಿಹಾಸ ಪ್ರಸಿದ್ಧ ಸಾಗರದ ಶ್ರೀ ಮಾರಿಕಾಂಬ ದೇವಿ ಜಾತ್ರೆ (Marikamba Jathre) ಇಂದಿನಿಂದ ಆರಂಭವಾಗಲಿದೆ. ತವರು ಮನೆಯಲ್ಲಿ ತಾಯಿ ದರ್ಶನ ನೀಡುತ್ತಿದ್ದು, ರಾತ್ರಿಯಿಂದಲೇ ಸಾವಿರಾರು ಜನರು ಸರತಿಯಲ್ಲಿ ನಿಂತು ದೇವಿಯನ್ನು ಕಣ್ತುಂಬಿಕೊಂಡರು. (ಈ ಸುದ್ದಿಯನ್ನು ಇನ್ನು 53 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಇವತ್ತು ಸಾಗರದ ಮಹಾಗಣಪತಿ ದೇವಸ್ಥಾನದಲ್ಲಿ ಮಾಂಗಲ್ಯ ಪೂಜೆ, ಬ್ರಾಹ್ಮಿ ಮುಹೂರ್ತದಲ್ಲಿ ತಾಯಿಗೆ ದೃಷ್ಟಿ ಇಡುವುದು, ಮಾಂಗಲ್ಯ ಧಾರಣೆ ಕಾರ್ಯಕ್ರಮ ನಡೆಯಿತು. ಬೆಳಗಿನ ಜಾವ 3 ಗಂಟೆಗೆ ಅರ್ಚಕರ ಮನೆಯಲ್ಲಿ ಪೂಜೆ ನಡೆಯಿತು. ಬಳಿಕ ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ಮಂಗಳ ದ್ರವ್ಯ ತರಲಾಯಿತು. ದೇವಿಯ ತವರು ಮನೆಯಲ್ಲಿ ಉತ್ಸವ ಮೂರ್ತಿಗೆ ಆಭರಣ ತೊಡಿಸಿ ಪೂಜೆ ಸಲ್ಲಿಸಲಾಯಿತು.

Sagar-Marikamba-Jathre-Begins

ರಾತ್ರಿಯಿಂದಲೇ ಕಾದು ಕುಳಿತ ಭಕ್ತರು

ಮಾರಿಕಾಂಬೆಯ ದರ್ಶನಕ್ಕೆ ಕಳೆದ ರಾತ್ರಿಯಿಂದಲೆ ಭಕ್ತರು ಸರತಿಯಲ್ಲಿ ಕಾದು ಕುಳಿತಿದ್ದರು. ರಾತ್ರಿ 10 ಗಂಟೆ ಹೊತ್ತಿಗೆ ಸಾಗರದ ಉಪ ವಿಭಾಗೀಯ ಆಸ್ಪತ್ರೆವರೆಗೆ ಸರತಿ ಸಾಲು ತಲುಪಿತ್ತು. ಮಧ್ಯರಾತ್ರಿ ಹೊತ್ತಿಗೆ ಸಾಗರ ಪೊಲೀಸ್‌ ಠಾಣೆ ವೃತ್ತದೆವರೆಗೆ ಸರತಿ ಸಾಲು ಬೆಳೆದಿತ್ತು. ಬೆಳಗ್ಗೆ ದೇವಿಯ ಪ್ರಥಮ ದರ್ಶನವಾಗುತ್ತಿದ್ದಂತೆ ಭಕ್ತರು ಘೋಷಣೆಗಳನ್ನು ಕೂಗುತ್ತ ದೇವಿಗೆ ನಮಸ್ಕರಿಸಿದರು.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ

Sagar-Marikamba-Jathre-Begins

ಒಂಭತ್ತು ದಿನದ ವೈಭವದ ಜಾತ್ರೆ

ಮೂರು ವರ್ಷಕ್ಕೊಮ್ಮೆ ಜಾತ್ರೆ ನಡೆಯಲಿದೆ. 9 ದಿನದ ಜಾತ್ರೆ ಅವಧಿಯಲ್ಲಿ ತಾಯಿಯು ಒಂದು ದಿನ ತವರು ಮನೆಯಲ್ಲಿ, 8 ದಿನ ಗಂಡನ ಮನೆಯಲ್ಲಿ ದರ್ಶನ ನೀಡುತ್ತಾಳೆ. ದೇವಿಯನ್ನು ಕಣ್ತುಂಬಿಕೊಳ್ಳಲು, ಆಕೆಯ ಆಶೀರ್ವಾದ ಪಡೆಯಲು ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

JNNCE-COLLEGE-ADVT.

Leave a Comment