ಶಿವಮೊಗ್ಗ ಲೈವ್‌ BIG IMPACT, ಡೇಂಜರಸ್‌ ಹಂಪ್‌ಗಳಿಂದ ಶೀಘ್ರ ಮುಕ್ತಿ, ಮಹತ್ವದ ಮೀಟಿಂಗ್‌

ಶಿವಮೊಗ್ಗ: ನಗರದ ವಿವಿಧ ರಸ್ತೆಗಳಲ್ಲಿ ಸವಾರರ ಪಾಲಿಗೆ ಕಂಟಕವಾಗಿದ್ದ ಅವೈಜ್ಞಾನಿಕ ಹಂಪ್‌ಗಳ (road humps) ಕುರಿತು ಶಿವಮೊಗ್ಗ ಲೈವ್.ಕಾಂ ಸರಣಿ ವರದಿಗಳನ್ನು ಪ್ರಕಟಿಸಿತ್ತು. ಈ ವರದಿಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಮಹಾನಗರ ಪಾಲಿಕೆ ಕಮಿಷನರ್ ಮಾಯಣ್ಣಗೌಡ ಅವರು, ಕೂಡಲೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಈ ಕುರಿತು ವಾಟ್ಸಾಪ್ ಮೂಲಕ ಪ್ರತಿಕ್ರಿಯಿಸಿರುವ ಅವರು, ಸಾರ್ವಜನಿಕರ ಹಿತದೃಷ್ಟಿಯಿಂದ ಕೈಗೊಳ್ಳಲಿರುವ ಕ್ರಮಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

BIG-IMPACT-about-Dangerous-humps-in-Shimoga-city.

ಕಮಿಷನರ್‌ ಏನೆಲ್ಲ ಹೇಳಿದರು?

1ನಗರದಲ್ಲಿ ಅವೈಜ್ಞಾನಿಕವಾಗಿ ಹಂಪ್‌ಗಳನ್ನು ನಿರ್ಮಿಸಿರುವುದು ಮತ್ತು ಅವುಗಳಿಂದ ಅಪಘಾತಗಳು ಸಂಭವಿಸುತ್ತಿರುವುದು ಸತ್ಯ ಎಂದು ಕಮಿಷನರ್ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಈಗಾಗಲೇ ಸಮರೋಪಾದಿಯಲ್ಲಿ ಕ್ಷೇತ್ರೀಯ ಪರಿಶೀಲನೆ ಹಾಗೂ ತಪಾಸಣೆ ನಡೆಸಲಾಗುತ್ತದೆ.

Road-Humps-in-Shivamogga-City

2ಮೊದಲ ಹಂತವಾಗಿ ಅವೈಜ್ಞಾನಿಕ ಎಂದು ಗುರುತಿಸಲಾದ ಸುಮಾರು 15ಕ್ಕೂ ಹೆಚ್ಚು ಹಂಪ್‌ಗಳನ್ನು ತಕ್ಷಣವೇ ತೆರವುಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ.

3ಮುಂದೆ ರಸ್ತೆಯ ಅಗಲ, ಸಂಚಾರ ದಟ್ಟಣೆ ಹಾಗೂ ಅಗತ್ಯಕ್ಕೆ ಅನುಗುಣವಾಗಿ ಪ್ರತ್ಯೇಕ ಡಿಸೈನ್‌ಗಳನ್ನು ಸಿದ್ಧಪಡಿಸಿ, ವೈಜ್ಞಾನಿಕವಾಗಿ ವೇಗ ನಿಯಂತ್ರಕಗಳನ್ನು ಅಳವಡಿಸಲು ಯೋಜನೆ ರೂಪಿಸಲಾಗಿದೆ.

160226 Accident Due to unscientific humps in Shivamogga Savalanga Road 1

4ಅಸಮರ್ಪಕವಾಗಿ ಹಂಪ್‌ಗಳನ್ನು ನಿರ್ಮಿಸಿದ ಗುತ್ತಿಗೆದಾರರು ಹಾಗೂ ಇದಕ್ಕೆ ಕಾರಣರಾದ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

Mayanna-Gowda-Shimoga-Palike-Commissioner

ಮಧ್ಯಾಹ್ನ ತುರ್ತು ಮೀಟಿಂಗ್‌

ಇನ್ನು, ಶಿವಮೊಗ್ಗ ನಗರದ ವಿವಿಧೆಡೆ ಹಂಪ್‌ಗಳಿಂದ ಆಗುತ್ತಿರುವ ಅವಘಡಗಳ ಕುರಿತು ಚರ್ಚಿಸಲು ಮಹಾನಗರ ಪಾಲಿಕೆಯಲ್ಲಿ ತುರ್ತು ಸಭೆ ಆಯೋಜಿಸಲಾಗಿದೆ. ಪಾಲಿಕೆ ಅಧಿಕಾರಿಗಳು, ಸಂಚಾರ ಪೊಲೀಸರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಭೆ ಬಳಿಕ ಇಂದು ಸಂಜೆ ವೇಳೆಗೆ ನಗರದ ವಿವಿಧೆಡೆ ಹಂಪ್‌ಗಳ ತೆರವು ಕಾರ್ಯಾಚರಣೆ ನಡೆಯಲಿದೆ ಎಂದು ತಿಳಿದು ಬಂದಿದೆ.

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Shivamogga-Live-Number-1-Promotion
Shivamogga-Live-Number-1-Promotion

Leave a Comment