ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಭದ್ರಾವತಿ: ಕೆಎಸ್ಆರ್‌ಟಿಸಿ (KSRTC) ಬಸ್ ನಿಲ್ದಾಣದಲ್ಲಿ ಫೆಬ್ರವರಿ 12ರಂದು ಬಸ್ ಹತ್ತುವ ವೇಳೆ ಮಹಿಳೆಯೊಬ್ಬರ ಕೈಚೀಲದಲ್ಲಿದ್ದ 28 ಗ್ರಾಂ ತೂಕದ ಬಂಗಾರದ ಸರ (gold chain) ಕಳ್ಳತನವಾಗಿದೆ. ಶಿವಮೊಗ್ಗ ತಾಲೂಕಿನ ಮುದುವಾಲ ಗ್ರಾಮದ ಶಾಂತಮ್ಮ ಎಂಬುವವರು ತಮ್ಮ ₹3,00,000 ಮೌಲ್ಯದ ಸರ ಕಳುವಾಗಿದೆ ಎಂದು ದೂರು ನೀಡಿದ್ದಾರೆ.
ಶಾಂತಮ್ಮ ಅವರು ಅಂತರಘಟ್ಟಮ್ಮ ದೇವಸ್ಥಾನದ ಹಬ್ಬದ ಪ್ರಯುಕ್ತ ಭದ್ರಾವತಿಯ ಭದ್ರಾ ಕಾಲೋನಿಯಲ್ಲಿರುವ ತಮ್ಮ ತಂಗಿಯ ಮಗನ ಮನೆಗೆ ಬಂದಿದ್ದರು. ಹಬ್ಬ ಮುಗಿಸಿ ಭದ್ರಾವತಿಯಿಂದ ಶಿವಮೊಗ್ಗಕ್ಕೆ ಹೋಗುವ ಸರ್ಕಾರಿ ಬಸ್ ಹತ್ತಿದ್ದರು. ಬಸ್ಸು ಹೊರಟು ಜಯಶ್ರೀ ಸರ್ಕಲ್ ಬಳಿ ತಲುಪಿದಾಗ, ಟಿಕೆಟ್ ಪಡೆಯಲು ಆಧಾರ ಕಾರ್ಡ್ ತೆಗೆಯಲೆಂದು ತಮ್ಮ ಕೈಚೀಲದಲ್ಲಿದ್ದ ಪರ್ಸ್ ಅನ್ನು ಪರಿಶೀಲಿಸಿದ್ದಾರೆ.

ಈ ವೇಳೆ ಪರ್ಸ್‌ನಲ್ಲಿ ಇಟ್ಟಿದ್ದ 28 ಗ್ರಾಂ ತೂಕದ ಬಂಗಾರದ ಸರ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಬಸ್ ಹತ್ತುವ ಸಮಯ ಜನಸಂದಣಿ ಹೆಚ್ಚಿತ್ತು. ಈ ವೇಳೆ ಸರವನ್ನು ಕಳ್ಳತನ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಭದ್ರಾವತಿ ನ್ಯೂ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – 28 ವರ್ಷದ ಯುವಕನಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ, ₹1.30 ಲಕ್ಷ ದಂಡ, ಕಾರಣವೇನು?
LATEST NEWS
- ತಡರಾತ್ರಿ 2 ಗಂಟೆಗೆ ಕೇಳಿತು ಸ್ಪೋಟದ ಶಬ್ದ, ಮನೆಯಿಂದ ಹೊರ ಬಂದಾಗ ಕಾಣಿಸ್ತು ಬೆಚ್ಚಿಬೀಳುವ ದೃಶ್ಯ

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಬಾಡಿಗೆ ಬ್ಯಾಂಕ್ ಖಾತೆ ಕೇಸ್, ಶಿವಮೊಗ್ಗದಲ್ಲಿ ಮತ್ತಿಬ್ಬರು ಅರೆಸ್ಟ್, ಏನಿದು ಪ್ರಕರಣ?

- ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? | 19 ಫೆಬ್ರವರಿ 2026 | ಅಡಿಕೆ ಧಾರಣೆ

- KSRTC ಬಸ್ ಹತ್ತಿ ಪರ್ಸ್‌ನಲ್ಲಿದ್ದ ಆಧಾರ್ ಕಾರ್ಡ್ ತೆಗೆಯಲು ಮಂದಾದ ಮುಹಿಳೆಗೆ ಕಾದಿತ್ತು ಶಾಕ್

About The Editor
ನಿತಿನ್ ಆರ್.ಕೈದೊಟ್ಲು





