ತಡರಾತ್ರಿ 2 ಗಂಟೆಗೆ ಕೇಳಿತು ಸ್ಪೋಟದ ಶಬ್ದ, ಮನೆಯಿಂದ ಹೊರ ಬಂದಾಗ ಕಾಣಿಸ್ತು ಬೆಚ್ಚಿಬೀಳುವ ದೃಶ್ಯ

ಭದ್ರಾವತಿ: ನೆಹರೂ ನಗರದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಮೂರು ದ್ವಿಚಕ್ರ ವಾಹನಗಳಿಗೆ (three bikes) ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಫೆಬ್ರವರಿ 16ರ ತಡರಾತ್ರಿ ಈ ಕೃತ್ಯ ನಡೆದಿದೆ. ಸುಮಾರು ₹1.85 ಲಕ್ಷ ಮೌಲ್ಯದ ಬೈಕ್‌ಗಳು ಸುಟ್ಟು ಕರಕಲಾಗಿವೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ನೆಹರೂ ನಗರದ ನಿವಾಸಿ ಆದಿಲ್ ಎಂಬುವವರು ಫೆಬ್ರವರಿ 16ರ ರಾತ್ರಿ 11 ಗಂಟೆಗೆ ಕೆಲಸ ಮುಗಿಸಿ ಮನೆಗೆ ಬಂದಿದ್ದರು. ತಮಗೆ ಹಾಗೂ ತಮ್ಮ ಅಣ್ಣಂದಿರಿಗೆ ಸೇರಿದ ಬಜಾಜ್ ಡಿಸ್ಕವರ್, ಪಲ್ಸರ್ ಮತ್ತು ಪ್ಲಾಟಿನಾ ಬೈಕ್‌ಗಳನ್ನು ಮನೆಯ ಕಾಂಪೌಂಡ್ ಒಳಗೆ ನಿಲ್ಲಿಸಿ ಮಲಗಿದ್ದರು. ಫೆಬ್ರವರಿ 17ರ ಬೆಳಗಿನ ಜಾವ 2 ಗಂಟೆ ಹೊತ್ತಿಗೆ ಯಾವುದೋ ಸ್ಫೋಟದ ಶಬ್ದ ಕೇಳಿ ಮನೆಯವರು ಹೊರಬಂದು ನೋಡಿದಾಗ ಬೈಕ್‌ಗಳು ಬೆಂಕಿಗೆ ಆಹುತಿಯಾಗುತ್ತಿರುವುದು ಬೆಳಕಿಗೆ ಬಂದಿದೆ.

Bhadravathi-Old-Town-Police-Station

Bhadravathi-Old-Town-Police-Station

ಕೂಡಲೇ ಎಚ್ಚೆತ್ತ ಮನೆಯವರು ಹಾಗೂ ನೆರೆಹೊರೆಯವರು ನೀರು ಹಾಕಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಅಷ್ಟರಲ್ಲಾಗಲೇ ಮೂರೂ ಬೈಕ್‌ಗಳು ಸಂಪೂರ್ಣವಾಗಿ ಹಾನಿಗೊಳಗಾಗಿದ್ದವು ಎಂದು ಆರೋಪಿಸಲಾಗಿದೆ. ಹಳೆನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – KSRTC ಬಸ್‌ ಹತ್ತಿ ಪರ್ಸ್‌ನಲ್ಲಿದ್ದ ಆಧಾರ್‌ ಕಾರ್ಡ್‌ ತೆಗೆಯಲು ಮಂದಾದ ಮುಹಿಳೆಗೆ ಕಾದಿತ್ತು ಶಾಕ್

Leave a Comment