ಸಾಗರ ಮಾರಿಕಾಂಬಾ ದೇವಿ ಮೆರವಣಿಗೆ ನೋಡಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಆಘಾತ

ಸಾಗರ: ಇಲ್ಲಿನ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಿಯ ವನಕ್ಕೆ ಬಿಡುವ ಮೆರವಣಿಗೆಯ (procession) ಸಂದರ್ಭ ಕಳ್ಳರು ವ್ಯಕ್ತಿಯೊಬ್ಬರ ಕೊರಳಿನಲ್ಲಿದ್ದ ಚಿನ್ನದ ಸರ ಕಳ್ಳತನ ಮಾಡಿದ್ದಾರೆ. ಫೆಬ್ರವರಿ 12ರ ತಡರಾತ್ರಿ ಜೆ.ಸಿ. ರಸ್ತೆಯ ಶ್ರೀ ಕಾಳಿಕಾಂಬಾ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಸಾಗರದ ಶ್ರೀಕಾಂತ್‌ ವಜ್ರ ಶೇಠ್‌ ಅವರು ಫೆಬ್ರವರಿ 12ರ ರಾತ್ರಿ 12.45 ರಿಂದ 1 ಗಂಟೆಯ ಸಮಯದಲ್ಲಿ ದೇವಿಯ ಮೆರವಣಿಗೆ ವೀಕ್ಷಿಸಲು ಕಾಳಿಕಾಂಬಾ ದೇವಸ್ಥಾನದ ಬಳಿ ನಿಂತಿದ್ದರು. ಈ ವೇಳೆ ಕಳ್ಳರು ಇವರ ಕೊರಳಿನಲ್ಲಿದ್ದ ಸುಮಾರು 19 ಗ್ರಾಂ ತೂಕದ ಬಂಗಾರದ ಚೈನ್ ಹಾಗೂ ಹವಳ ಸುತ್ತಿರುವ ಪದಕ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಮೆರವಣಿಗೆಯ ಗದ್ದಲದಲ್ಲಿ ಈ ಕೃತ್ಯ ನಡೆದಿದ್ದು, ಸರ ಕಳೆದುಕೊಂಡ ವಿಷಯ ತಡವಾಗಿ ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Sagara Police Station Building

ಇದನ್ನೂ ಓದಿ – ಮೈಸೂರು – ತಾಳಗುಪ್ಪ ರೈಲುಗಳ ಕುರಿತು ಮಹತ್ವದ ಅಪ್‌ಡೇಟ್‌

ಕಳ್ಳತನವಾದ ಬಂಗಾರದ ಸರದ ಮೌಲ್ಯ ಸುಮಾರು ₹1,05,000 ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಶ್ರೀಕಾಂತ್‌ ವಜ್ರ ಶೇಠ್‌ ದೂರು ನೀಡಿದ್ದಾರೆ. ಸಾಗರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment