ಶಿವಮೊಗ್ಗದಲ್ಲಿ ಏರ್‌ಟೆಲ್‌ ಮೊಬೈಲ್‌ ಟವರ್‌ನ ಉಪಕರಣ ಕಳವು, ಆಗಿದ್ದೇನು?

number-1-advt-copy-new.webp

ಶಿವಮೊಗ್ಗ: ಶ್ರೀರಾಂಪುರದ ಗುಡ್ಡದ ಹರಕೆರೆ ಗ್ರಾಮದಲ್ಲಿರುವ ಏರ್‌ಟೆಲ್ ಟವರ್‌ನ (Airtel tower) ಬೆಲೆಬಾಳುವ ಜನರೇಟರ್ ಡಿ.ಜಿ ಆಲ್ಟರ್ ನೇಟರ್ ಅನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ. ಸುಮಾರು ₹70,000 ರೂಪಾಯಿ ಮೌಲ್ಯದ ಈ ಉಪಕರಣ ಕಳುವಾಗಿದೆ ಎಂದು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಶಿವಮೊಗ್ಗದ JNN ಕಾಲೇಜು ವಿದ್ಯಾರ್ಥಿಗಳು ಚಾಂಪಿಯನ್ಸ್‌, ಯಾವ್ಯಾವ ಸ್ಪರ್ಧೆಗಳಲ್ಲಿ ಯಾರೆಲ್ಲ ಗೆದ್ದಿದ್ದಾರೆ?

ದಾವಣಗೆರೆಯ ತೇಜಾ ಟೆಕ್ನಿಕಲ್ ಸರ್ವಿಸಸ್‌ನಲ್ಲಿ ಎಸ್ಟೇಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ನಾಗ ಕುಮಾರ್ ದೂರು ನೀಡಿದ್ದಾರೆ. ಸಾಗರ ರಸ್ತೆಯ ಪೆಸಿಟ್ ಕಾಲೇಜ್ ಎದುರಿಗಿರುವ ಏರ್‌ಟೆಲ್ ಟವರ್‌ಗೆ ಸೂಪರ್ ವೈಸರ್ ವಿನಯ್ ಭೇಟಿ ನೀಡಿದ್ದಾಗ ಜನರೇಟರ್ ಸುಸ್ಥಿತಿಯಲ್ಲಿತ್ತು. ಸ್ವಲ್ಪ ದಿನದ ಬಳಿಕ ಟೆಕ್ನಿಷಿಯನ್ ಶಿವಮೂರ್ತಪ್ಪ ಅವರು ಕೆಲಸಕ್ಕೆ ಹೋದಾಗ ಜನರೇಟರ್‌ನ ಆಲ್ಟರ್ ನೇಟರ್ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ವಿಷಯ ತಿಳಿದು ನಾಗಕುಮಾರ್ ಅವರು ತಮ್ಮ ಕಂಪನಿಯ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ದೂರು ನೀಡಿದ್ದಾರೆ.

Sunrise Facility Services, Sri sai Trust Shimoga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : March 5, 2026 at 3:30 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಮಾರ್ಚ್ 5, 2026

Leave a Comment