ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಕೆಎಸ್ಆರ್‌ಟಿಸಿ ನಿಲ್ದಾಣದಲ್ಲಿ ಬಸ್ ಹತ್ತುವ ವೇಳೆ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‌ನಿಂದ ಸುಮಾರು ₹1.98 ಲಕ್ಷ ಮೌಲ್ಯದ ಚಿನ್ನದ ಸರ (Gold Chain) ಹಾಗೂ ನಗದು ಕಳ್ಳತನವಾಗಿರುವ ಘಟನೆ ನಡೆದಿದೆ.
ಶ್ವೇತಾ ಎನ್.ವಿ. ಅವರು ಶಿವಮೊಗ್ಗದ ತುಂಗಾನಗರದಲ್ಲಿರುವ ತಮ್ಮ ತವರು ಮನೆಯಲ್ಲಿ ನಡೆದ ನಾಮಕರಣ ಕಾರ್ಯಕ್ರಮ ಮುಗಿಸಿ, ವಾಪಸ್ ತರೀಕೆರೆಗೆ ಹೋಗಲು ಬಸ್ ನಿಲ್ದಾಣಕ್ಕೆ ಬಂದಿದ್ದರು. ಸಂಜೆ 6:10ರ ಸುಮಾರಿಗೆ ಬೆಂಗಳೂರು ಬಸ್ ಬಂದಾಗ, ಶ್ವೇತಾ ಅವರು ಬಸ್ ಹತ್ತಿದ್ದಾರೆ. ಈ ವೇಳೆ ಬಸ್‌ನಲ್ಲಿ ಭಾರಿ ಜನದಟ್ಟಣೆ ಇತ್ತು ಎಂದು ಆರೋಪಿಸಿದ್ದಾರೆ.

ಬಸ್ ಹತ್ತಿದ ನಂತರ ಕಂಡಕ್ಟರ್ ಬಳಿ ಟಿಕೆಟ್ ಪಡೆಯಲು ವ್ಯಾನಿಟಿ ಬ್ಯಾಗ್ ಜಿಪ್ ತೆಗೆದಾಗ, ಅದರಲ್ಲಿದ್ದ ಸುಮಾರು 40 ಗ್ರಾಂ ತೂಕದ ಎರಡು ಎಳೆಯ ಚಿನ್ನದ ಸರ ಹಾಗೂ ₹6,000 ನಗದು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಕಳುವಾದ ಬಂಗಾರದ ಸರದ ಅಂದಾಜು ಬೆಲೆ ₹1,92,000 ಎಂದು ತಿಳಿಸಲಾಗಿದೆ.
ಘಟನೆ ನಡೆದ ಬಳಿಕ ಶ್ವೇತಾ ಅವರು ತಮ್ಮ ಊರಿಗೆ ತೆರಳಿ ಮನೆಯವರೊಂದಿಗೆ ಚರ್ಚಿಸಿ, ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗದ ಶೇ.90ರಷ್ಟು ಹೊಟೇಲ್‌ಗಳು ಬಂದ್, ಕಾರಣವೇನು?

LATEST NEWS
- ಕಾರ್ಗಲ್ನಲ್ಲಿ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಿಢೀರ್ ಅಸ್ವಸ್ಥ, ಆಸ್ಪತ್ರೆಗೆ ದಾಖಲು

- ಭದ್ರಾವತಿಯ ಒಂದೇ ಕುಟುಂಬದ ಐದು ಜನರಿಗೆ 2 ವರ್ಷ ಜೈಲು ಶಿಕ್ಷೆ, ₹1,90,000 ದಂಡ, ಏನಿದು ಪ್ರಕರಣ?

- ಶಿವಮೊಗ್ಗದಲ್ಲಿ ಅಮಾನವೀಯ ಕೃತ್ಯ, ಕಂಬಕ್ಕೆ ಬೆಕ್ಕಿನ ಮೃತದೇಹ ಕಟ್ಟಿದ ಕಿಡಿಗೇಡಿಗಳು

- ಶಿರಾಳಕೊಪ್ಪದ 23 ವರ್ಷದ ಯುವಕನಿಗೆ 20 ವರ್ಷ ಜೈಲು, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್

- ಚಿನ್ನಾಭರಣ ಸಂಸ್ಥೆಯಲ್ಲಿ 50ಕ್ಕೂ ಹೆಚ್ಚು ಹುದ್ದೆಗಳಿಗೆ ನೇರ ಸಂದರ್ಶನ, ಯಾವಾಗ? ಎಷ್ಟಿರಲಿದೆ ಸಂಬಳ?

About The Editor
ನಿತಿನ್ ಆರ್.ಕೈದೊಟ್ಲು





