ಶಿವಮೊಗ್ಗ ಸಿಟಿಯಲ್ಲಿ ಶೆಟ್ಟರ ಸಂತೆ, ಶ್ರೀನಿವಾಸ ಕಲ್ಯಾಣೋತ್ಸವ, ಯಾವಾಗ? ಎಲ್ಲಿ ನಡೆಯಲಿದೆ?

ಶಿವಮೊಗ್ಗ: ಏಪ್ರಿಲ್ 2 ರಿಂದ 5 ರವರೆಗೆ ನಗರದ ಫ್ರೀಡಂ ಪಾರ್ಕ್‌ನಲ್ಲಿ ಮೂರನೇ ಆವೃತ್ತಿಯ ಶೆಟ್ಟರ ಸಂತೆ (Shettara Santhe) ನಡೆಯಲಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್. ಅರುಣ್ ತಿಳಿಸಿದರು.

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಎಸ್.ಅರುಣ್‌, ಆರ್ಯವೈಶ್ಯ ಸ್ನೇಹಿತರ ಬಳಗದ ವತಿಯಿಂದ ಆಯೋಜಿಸಲಾಗಿರುವ ಈ ನಾಲ್ಕು ದಿನಗಳ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ರಸದೌತಣ ದೊರೆಯಲಿದೆ ಎಂದರು.

Shettara-Sante-Press-Meet-By-D-S-Arun-at-Press-Trust-Shimoga

125 ಮಳಿಗೆಗಳು, ವೈವಿಧ್ಯಮಯ ತಿನಿಸುಗಳು

ಶೆಟ್ಟರ ಸಂತೆಯ ಪ್ರಮುಖ ಆಕರ್ಷಣೆಯಾಗಿ ಮನೆಯಲ್ಲಿ ತಯಾರಿಸಿದ ವೈವಿಧ್ಯಮಯ ತಿಂಡಿ-ತಿನಿಸುಗಳ ಪ್ರದರ್ಶನ ಮತ್ತು ಮಾರಾಟ ಇರಲಿದೆ. ಇದಕ್ಕಾಗಿ ಒಟ್ಟು 125 ಮಳಿಗೆಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಸ್ಥಳೀಯರಿಗೆ ಮತ್ತು ಮಹಿಳಾ ಸಂಘಟನೆಗಳಿಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.

Shettara-Sante-Press-Meet-By-D-S-Arun-at-Press-Trust-Shimoga

ಯಾವ್ಯಾವ ದಿನ ಏನೇನು ಕಾರ್ಯಕ್ರಮ?

ಏಪ್ರಿಲ್ 2: ಸಂಜೆ 6:30ಕ್ಕೆ ಜಿಲ್ಲೆಯ ಪ್ರಸಿದ್ಧ ಗಾಯಕರಿಂದ ಪಂಚಮ ವೇದ ಪ್ರೇಮದ ನಾದ ಎಂಬ ಕನ್ನಡ ಮತ್ತು ಹಿಂದಿ ಭಾಷೆಯ ಹಳೆಯ ಚಿತ್ರಗೀತೆಗಳ ಗಾಯನ ಕಾರ್ಯಕ್ರಮ ಇರಲಿದೆ.

ಏಪ್ರಿಲ್ 3: ಸಂಜೆ 5 ಗಂಟೆಯಿಂದ ಬೆಂಗಳೂರಿನ ಶ್ರೀವಾರಿ ಫೌಂಡೇಶನ್ ವತಿಯಿಂದ ಅತ್ಯಂತ ವಿಜೃಂಭಣೆಯ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಜರುಗಲಿದೆ.

ಇದನ್ನೂ ಓದಿ – ಕೂಡ್ಲಿಯಲ್ಲಿ ಸಾವಿರ ಸಾವಿರ ಜನರಿಂದ ಪುಣ್ಯ ಸ್ನಾನ, ಹೇಗಿದೆ ಈ ಬಾರಿ ಜಾತ್ರೆ?

ಏಪ್ರಿಲ್ 4: ಸಂಜೆ 6 ಗಂಟೆಗೆ ಗಾಂಧಿಬಜಾರ್‌ನ ವಾಸವಿ ಮಹಿಳಾ ಸಂಘದ 50ನೇ ವರ್ಷದ ಸುವರ್ಣ ಮಹೋತ್ಸವ ಸಂಭ್ರಮ ಆಚರಿಸಲಾಗುವುದು.

ಏಪ್ರಿಲ್ 5: ಸಂಜೆ 6:30ಕ್ಕೆ ಗಾಯಕ ವಾಸು ದೀಕ್ಷಿತ್ ಮತ್ತು ತಂಡದಿಂದ ಭಜನಾ ಜಾಮ್ಮಿಂಗ್ ಎಂಬ ವಿಶೇಷ ಸಂಗೀತ ಕಾರ್ಯಕ್ರಮ ಇರಲಿದೆ.

ಸುದ್ದಿಗೋಷ್ಠಿಯಲ್ಲಿ ಶ್ರೀನಾಗ್, ಎಸ್.ವಿ.ಭರತ್, ಅಶ್ವಥ್, ಶ್ರೀನಿವಾಸ್, ವಿದ್ಯಾ ಇದ್ದರು.

Sunrise Facility Services, Sri sai Trust Shimoga

Leave a Comment