ಶಿವಮೊಗ್ಗದಲ್ಲಿ ದಾವಣಗೆರೆಗಿಂತಲು ದೊಡ್ಡ BSC ಶೋರೂಂ, ಏನೇನಿರುತ್ತೆ? ಯಾವಾಗ ಶುರು?

ಶಿವಮೊಗ್ಗ: ದಾವಣಗೆರೆಯ ಪ್ರತಿಷ್ಠಿತ ಜವಳಿ ಸಂಸ್ಥೆ ಬಿ.ಎಸ್.ಚನ್ನಬಸಪ್ಪ ಅಂಡ್‌ ಸನ್ಸ್‌ (BSC) ಶಿವಮೊಗ್ಗಕ್ಕೆ ಪಾದಾರ್ಪಣೆ ಮಾಡುತ್ತಿದೆ. ಸುಮಾರು 85 ವರ್ಷಗಳ ಇತಿಹಾಸವಿರುವ ಈ ಸಂಸ್ಥೆ, ದಾವಣಗೆರೆ ಮತ್ತು ಬೆಳಗಾವಿಯ ನಂತರ ಈಗ ಶಿವಮೊಗ್ಗದ ಗ್ರಾಹಕರ ಬೇಡಿಕೆಗೆ ಸ್ಪಂದಿಸಿ ತನ್ನ ಹೊಸ ಶಾಖೆ (showroom) ತೆರೆಯಲು ಸಜ್ಜಾಗಿದೆ.➤ ಸುದ್ದಿಯ ಮುಂದಿನ 9 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ನಗರದ ಬಿ.ಹೆಚ್‌.ರಸ್ತೆಯಲ್ಲಿ ರಾಯಲ್‌ ಆರ್ಕಿಡ್‌ ಹೊಟೇಲ್‌ ಮುಂಭಾಗದ ದೊಡ್ಡ ಕಟ್ಟಡದಲ್ಲಿ ಬಿ.ಎಸ್‌.ಚನ್ನಬಸಪ್ಪ ಅಂಡ್‌ ಸನ್ಸ್‌ ಶೋರೂಂ ಆರಂಭವಾಗಲಿದೆ. ಈ ಕುರಿತು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಚಂದ್ರಶೇಖರ್ ಬಂಕಾಪುರ್ ಅವರು ಶಿವಮೊಗ್ಗ ಲೈವ್‌.ಕಾಂ ಜೊತೆ ಮಾತನಾಡಿದರು. ಶಿವಮೊಗ್ಗದಲ್ಲಿ ಸ್ಥಾಪಿಸಲಾಗುತ್ತಿರುವ ಮಳಿಗೆಯ ಕುರಿತು EXCLUSIVE ಮಾಹಿತಿ ನೀಡಿದ್ದಾರೆ.

BS-Channabasappa-and-Sons-Shop-in-Shimoga-city.

BS-Channabasappa-and-Sons-Shop-in-Shimoga-city.

ಶಿವಮೊಗ್ಗವನ್ನೇ ಆಯ್ಕೆ ಮಾಡಿಕೊಂಡಿದ್ದೇಕೆ?

‘ದಾವಣಗೆರೆಯಲ್ಲಿರುವ ನಮ್ಮ ಮಳಿಗೆಗಳಿಗೆ ಶಿವಮೊಗ್ಗ ಜಿಲ್ಲೆಯಿಂದ ದೊಡ್ಡ ಸಂಖ್ಯೆಯ ಗ್ರಾಹಕರು ಬರುತ್ತಿದ್ದರು. ಶಿವಮೊಗ್ಗದಲ್ಲೂ ಒಂದು ಶಾಖೆ ಆರಂಭಿಸಿ ಎಂದು ಗ್ರಾಹಕರು ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದರು. ಆದರೆ ನಮಗೆ ಸೂಕ್ತ ಸ್ಥಳ ಸಿಕ್ಕಿರಲಿಲ್ಲ. ಈಗ ನಮ್ಮ ನಿರೀಕ್ಷೆಯಂತೆಯೇ ನಗರದ ಪ್ರಮುಖ ಕಡೆ ಜಾಗ ಸಿಕ್ಕಿರುವುದರಿಂದ ಇಲ್ಲಿ ಕಾರ್ಯಾರಂಭ ಮಾಡುತ್ತಿದ್ದೇವೆ.ʼ

ಶಿವಮೊಗ್ಗದ ಶೋರೂಂ ವಿಶೇಷತೆಗಳೇನು?

BSC%202

ಎಲ್ಲರಿಗು ಅನುಕೂಲವಾದ ಲೊಕೇಷನ್

‘ಶಿವಮೊಗ್ಗ ನಗರದ ಹೃದಯಭಾಗದಲ್ಲಿ ನಮ್ಮ ಶೋರೂಂ ಸಿದ್ದವಾಗುತ್ತಿದೆ. ಬಸ್ ನಿಲ್ದಾಣಕ್ಕೆ ಅತ್ಯಂತ ಹತ್ತಿರದಲ್ಲಿ ಇದೆ. ನಗರವಾಸಿಗಳಿಗೆ ಮಾತ್ರವಲ್ಲದೆ, ಹೊರಭಾಗದಿಂದ ಬರುವ ಗ್ರಾಹಕರಿಗೂ ಸಹಕಾರಿಯಾಗಲಿದೆ.‌ ಗ್ರಾಹಕರ ಅನುಕೂಲಕ್ಕಾಗಿ ಬೇಸ್‌ಮೆಂಟ್‌ನಲ್ಲಿ ವಿಶಾಲವಾದ ವಾಹನ ನಿಲ್ದಾಣದ ವ್ಯವಸ್ಥೆ ಮಾಡಲಾಗಿದೆ.ʼ

BSC%201

ಯಾವಾಗ ಆರಂಭ‌ ಆಗಲಿದೆ?

‘ಪ್ರಸ್ತುತ ಶೋರೂಮ್‌ನ ಒಳಾಂಗಣ ವಿನ್ಯಾಸದ ಕೆಲಸಗಳು ನಡೆಯುತ್ತಿದೆ. ಇನ್ನು ಮೂರು ತಿಂಗಳ ಅವಧಿಯಲ್ಲಿ ಮಳಿಗೆ ಅಧಿಕೃತವಾಗಿ ಆರಂಭವಾಗಲಿದೆ. ಗುಣಮಟ್ಟದ ಉತ್ಪನ್ನಗಳನ್ನು ಕಡಿಮೆ ದರದಲ್ಲಿ ನೀಡುವುದೇ ನಮ್ಮ ಗುರಿʼ ಎಂದು ವ್ಯವಸ್ಥಾಪಕ ನಿರ್ದೇಶಕ ಚಂದ್ರಶೇಖರ್ ಬಂಕಾಪುರ್ ಅವರು ಶಿವಮೊಗ್ಗ ಲೈವ್‌.ಕಾಂಗೆ ತಿಳಿಸಿದರು.

ಇದನ್ನೂ ಓದಿ – ಇವತ್ತು ಸರಕು ಅಡಿಕೆ ಎಷ್ಟಿದೆ? ರಾಶಿ, ಗೊರಬಲು ಧಾರಣೆ ಹೇಗಿದೆ? – 23 ಮಾರ್ಚ್‌ 2026

Sunrise Facility Services, Sri sai Trust Shimoga

Leave a Comment