ಮೈಸೂರು – ಶಿವಮೊಗ್ಗ ರೈಲು, ಎರಡು ದಿನ ಭಾಗಶಃ ರದ್ದು, ಯಾವಾಗ?

ರೈಲ್ವೆ ಸುದ್ದಿ: ಮೈಸೂರು ಮತ್ತು ಮೈಸೂರು ನ್ಯೂ ಗೂಡ್ಸ್ ಟರ್ಮಿನಲ್ ಬೈಪಾಸ್ ನಡುವೆ ನಡೆಯುತ್ತಿರುವ ರಸ್ತೆ ಕೆಳಸೇತುವೆ ನಿರ್ಮಾಣ ಕಾಮಗಾರಿಯ ಹಿನ್ನೆಲೆ ನೈರುತ್ಯ ರೈಲ್ವೆ (trains) ಕೆಲವು ರೈಲು ಸೇವೆಗಳ ಪುನರ್ ಆರಂಭ ಹಾಗೂ ಭಾಗಶಃ ರದ್ದುಪಡಿಸುವುದಾಗಿ ತಿಳಿಸಿದೆ.➤ ಸುದ್ದಿಯ ಮುಂದಿನ 9 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ರೈಲುಗಳ ಪುನಾರಂಭ

Train-Jan-Shatabdi-General-Image

2026 ಮಾರ್ಚ್ 21 ಮತ್ತು 24 ರಂದು ಭಾಗಶಃ ರದ್ದುಪಡಿಸಲಾಗಿದ್ದ ಕೆಲವು ರೈಲುಗಳು ಈಗ ತಮ್ಮ ನಿಯಮಿತ ವೇಳಾಪಟ್ಟಿಯಂತೆ ಸಂಚರಿಸಲಿವೆ.

ರೈಲು ಸಂಖ್ಯೆ 56267 ಅರಸೀಕೆರೆ – ಮೈಸೂರು ಪ್ಯಾಸೆಂಜರ್: ಬೆಳಗುಳ ಮತ್ತು ಮೈಸೂರು ನಡುವೆ ಭಾಗಶಃ ರದ್ದುಪಡಿಸಲಾಗಿದ್ದ ಈ ರೈಲು ಮರು ಆರಂಭವಾಗಿದ್ದು ನಿಯಮಿತ ವೇಳಾಪಟ್ಟಿಯಂತೆ ಸಂಚರಿಸಲಿದೆ.

ರೈಲು ಸಂಖ್ಯೆ 16225 ಮೈಸೂರು – ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್: ಮೈಸೂರು ಮತ್ತು ಬೆಳಗುಳ ನಡುವೆ ಭಾಗಶಃ ರದ್ದುಪಡಿಸಲಾಗಿದ್ದ ಈ ರೈಲು ಮರು ಆರಂಭವಾಗಿದ್ದು ನಿಯಮಿತ ವೇಳಾಪಟ್ಟಿಯಂತೆ ಸಂಚರಿಸಲಿದೆ.

Train-Jan-Shatabdi-General-Image

ಎರಡು ದಿನ ರೈಲುಗಳು ಭಾಗಶಃ ರದ್ದು

ರಸ್ತೆ ಕೆಳಸೇತುವೆ ಕಾಮಗಾರಿ ಮುಂದುವರಿದಿರುವ ಹಿನ್ನೆಲೆ ಕೆಲವು ರೈಲುಗಳು 2026 ಮಾರ್ಚ್ 28 ಮತ್ತು 31 ರಂದು ಭಾಗಶಃ ರದ್ದುಪಡಿಸಲಾಗುವುದು.

ರೈಲು ಸಂಖ್ಯೆ 56267 ಅರಸೀಕೆರೆ – ಮೈಸೂರು ಪ್ಯಾಸೆಂಜರ್: ಬೆಳಗುಳ ಮತ್ತು ಮೈಸೂರು ನಡುವೆ ಭಾಗಶಃ ರದ್ದುಪಡಿಸಲಾಗುತ್ತದೆ ಹಾಗೂ ಬೆಳಗುಳದಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ದಾವಣಗೆರೆಗಿಂತಲು ದೊಡ್ಡ BSC ಶೋರೂಂ, ಏನೇನಿರುತ್ತೆ? ಯಾವಾಗ ಶುರು?

ರೈಲು ಸಂಖ್ಯೆ 16225 ಮೈಸೂರು – ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್: ಮೈಸೂರು ಮತ್ತು ಬೆಳಗುಳ ನಡುವೆ ಭಾಗಶಃ ರದ್ದುಪಡಿಸಲಾಗುತ್ತದೆ ಹಾಗೂ ಮೈಸೂರು ಬದಲಿಗೆ ಬೆಳಗುಳದಿಂದ ತನ್ನ ಪ್ರಯಾಣ ಆರಂಭಿಸಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Sunrise Facility Services, Sri sai Trust Shimoga

Leave a Comment