ಆಗುಂಬೆ ಘಾಟಿಯಲ್ಲಿ ರಸ್ತೆಗೆ ಬಿದ್ದ ಮರ, ಕೆಲ ಹೊತ್ತು ಟ್ರಾಫಿಕ್‌ ಜಾಮ್

ತೀರ್ಥಹಳ್ಳಿ: ಆಗುಂಬೆ ಘಾಟಿಯ (Agumbe Ghat) 4ನೇ ತಿರುವಿನಲ್ಲಿ ಬೃಹತ್ ಮರವೊಂದು ರಸ್ತೆಗೆ ಉರುಳಿ ಬಿದ್ದು, ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಮರ ಬಿದ್ದ ಪರಿಣಾಮ ಘಾಟಿಯ ಎರಡು ಬದಿಗಳಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತು ಟ್ರಾಫಿಕ್ ಜಾಮ್ ಉಂಟಾಗಿತ್ತು.

ಇದನ್ನೂ ಓದಿ – ಕುಟುಂಬದ ಜೊತೆ ಊಟ ಮುಗಿಸಿ, ಮಾತನಾಡಿ ಮಲಗಲು ತೆರಳಿದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

Tree-Falls-on-Agumbe-Ghat-road-at-4th-curve

ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರವನ್ನು ತೆರವುಗೊಳಿಸಲು ಸ್ಥಳೀಯರು ಹಾಗೂ ವಾಹನ ಚಾಲಕರು ಕಾರ್ಯಾಚರಣೆ ಆರಂಭಿಸಿದರು. ಅರಣ್ಯ ಇಲಾಖೆ ಸಿಬ್ಬಂದಿ ಕೂಡ ಕಾರ್ಯಾಚರಣೆ ನಡೆಸಿದರು ಎಂದು ತಿಳಿದು ಬಂದಿದೆ. ಬೃಹತ್ ಮರವನ್ನು ಕತ್ತರಿಸಿ ರಸ್ತೆಯಿಂದ ಬದಿಗೆ ಸರಿಸಲಾಗಿದೆ.

Tree-Falls-on-Agumbe-Ghat-road-at-4th-curve

ಸದ್ಯ ಲಭ್ಯವಿರುವ ಮಾಹಿತಿಯ ಪ್ರಕಾರ, ರಸ್ತೆಯಲ್ಲಿದ್ದ ಮರವನ್ನು ತೆರವುಗೊಳಿಸಲಾಗಿದೆ. ಇದರಿಂದಾಗಿ ಸ್ಥಗಿತಗೊಂಡಿದ್ದ ವಾಹನ ಸಂಚಾರ ಈಗ ಪುನಾರಂಭಗೊಂಡಿದ್ದು, ಘಾಟಿಯಲ್ಲಿ ಸಂಚಾರ ಸುಗಮವಾಗಿದೆ. ಆಗುಂಬೆ ಘಾಟಿಯು ಶಿವಮೊಗ್ಗ ಮತ್ತು ಉಡುಪಿ ನಡುವೆ ಸಂಪರ್ಕ ಕಲ್ಪಿಸುತ್ತದೆ.

Sunrise Facility Services, Sri sai Trust Shimoga

Leave a Comment