ಕಾಳಿಂಗ ಸರ್ಪದ ಕಾರಣಕ್ಕೆ ಅಡಿಕೆ ಲಾರಿ ಪಲ್ಟಿ, ಆಗಿದ್ದೇನು?

ತೀರ್ಥಹಳ್ಳಿ: ರಸ್ತೆಗೆ ಅಡ್ಡ ಬಂದ ಕಾಳಿಂಗ ಸರ್ಪವನ್ನು ರಕ್ಷಿಸಲು ಹೋಗಿ ಅಡಿಕೆ ತುಂಬಿದ ಲಾರಿಯೊಂದು (arecanut truck) ಪಲ್ಟಿಯಾಗಿದೆ.➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ – ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ವಿರುದ್ಧ ಕಾಮೆಂಟ್‌ ಹಾಕಿದ ವ್ಯಕ್ತಿಗೆ ಸಂಕಷ್ಟ, ಆಗಿದ್ದೇನು?

Arecanut-Truck-falls-down-at-Thirthahalli

ಸಾಗರದಿಂದ ಕಾರ್ಕಳಕ್ಕೆ ಚಾಲಿ ಅಡಿಕೆ ತುಂಬಿಕೊಂಡು ತೆರಳುತ್ತಿದ್ದ ಲಾರಿಗೆ ಹಿರೇಸರದಲ್ಲಿ ಕಾಳಿಂಗ ಸರ್ಪ ರಸ್ತೆಗೆ ಅಡ್ಡ ಬಂದಿದೆ. ಹಾವಿನ ಮೇಲೆ ವಾಹನ ಹರಿಸುವುದನ್ನು ತಡೆಯಲು ಚಾಲಕ ಬ್ರೇಕ್‌ ಹಾಕಿದ್ದಾರೆ. ಈ ವೇಳೆ ನಿಯಂತ್ರಣ ತಪ್ಪಿದ ವಾಹನ ರಸ್ತೆಯಲ್ಲೇ ಪಲ್ಟಿ ಹೊಡೆದಿದೆ. ಅದೃಷ್ಟವಶಾತ್‌ ಯಾರಿಗು ಹಾನಿಯಾಗಿಲ್ಲ.

Arecanut-Truck-falls-down-at-Thirthahalli

ಕಾರ್ಯನಿಮಿತ್ತ ಇದೇ ಮಾರ್ಗದಲ್ಲಿ ತೆರಳುತ್ತಿದ್ದ ಶಾಸಕ ಆರಗ ಜ್ಞಾನೇಂದ್ರ ಅವರು ಅಪಘಾತ ಕಂಡ ತಕ್ಷಣ ತಮ್ಮ ಕಾರನ್ನು ನಿಲ್ಲಿಸಿ ಸ್ಥಳಕ್ಕೆ ಧಾವಿಸಿದರು. ಲಾರಿ ಚಾಲಕನನ್ನು ಮಾತನಾಡಿಸಿ, ಆರೋಗ್ಯ ವಿಚಾರಿಸಿದರು.

Sunrise Facility Services, Sri sai Trust Shimoga

Leave a Comment