ಶಿವಮೊಗದ ಸಿಟಿ ಬಸ್ಸಿನಲ್ಲಿ ಶಿಕ್ಷಕಿಯ ₹4,00,000 ದ ಮಾಂಗಲ್ಯ ಸರ ಕಳ್ಳತನ, ಹೇಗಾಯ್ತು ಘಟನೆ?

ಶಿವಮೊಗ್ಗ: ಶಿಕ್ಷಕಿಯೊಬ್ಬರ ಕೊರಳಲ್ಲಿದ್ದ ಚಿನ್ನದ ಸರವನ್ನು ಬಸ್ಸಿನಲ್ಲಿ ಕಳ್ಳತನ ಮಾಡಲಾಗಿದೆ. ಮಾರ್ಚ್ 12ರಂದು ಸಂಜೆ ಶಾಲೆಯಿಂದ ಕೆಲಸ ಮುಗಿಸಿ ಸಿಟಿ ಬಸ್ (city bus) ನಿಲ್ದಾಣದಿಂದ ಗೋಪಾಳಕ್ಕೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಸುದ್ದಿಯ ಮುಂದಿನ ಭಾಗ ಕೆಳಗಿದೆ

ನಗರದ ಗೋಪಾಳದ ನಿವಾಸಿ ಶಿಕ್ಷಕಿ ನಳಿನಾ ಎಂಬುವವರ ಎರಡು ಎಳೆಯ 40 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಿಡಿಗೇಡಿಗಳು ಕಳ್ಳತನ ಮಾಡಿದ್ದಾರೆ. ಇದರ ಮೌಲ್ಯ ₹4,00,000 ಲಕ್ಷ ಎಂದು ಅಂದಾಜಿಸಲಾಗಿದೆ.

Police-jeep-in-Shimoga.

Tunga-Nagara-Police-Station-Shimoga.avif

ಹೇಗಾಯ್ತು ಘಟನೆ?

Nanjappa Hospital Advertisement

ಬಸ್‌ನಲ್ಲಿ ವಿಪರೀತ ರಶ್ ಇದ್ದ ಸಂದರ್ಭ ಮಹಿಳೆಯೊಬ್ಬರು ನಳಿನಾ ಅವರಿಗೆ ಕುಳಿತುಕೊಳ್ಳಲು ಸೀಟು ಬಿಟ್ಟುಕೊಟ್ಟಿದ್ದರು. ಆ ವೇಳೆ ನಿಮ್ಮ ಸರ ಕಟ್ ಆಗಿದೆ ಎಂದು ಆ ಮಹಿಳೆ ತಿಳಿಸಿದ್ದರು. ಆಗ ನಳಿನಾ ಅವರು ಸರದ ಒಂದು ಎಳೆ ಕಟ್ ಆಗಿರುವುದನ್ನು ಗಮನಿಸಿ ಅದನ್ನು ವ್ಯಾನಿಟಿ ಬ್ಯಾಗಿನಲ್ಲಿ ಇಟ್ಟುಕೊಂಡಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.  

ಇದನ್ನೂ ಓದಿ – ಕಾಳಿಂಗ ಸರ್ಪದ ಕಾರಣಕ್ಕೆ ಅಡಿಕೆ ಲಾರಿ ಪಲ್ಟಿ, ಆಗಿದ್ದೇನು?

ಬಸ್‌ನಿಂದ ಇಳಿದು ನೋಡಿದಾಗ, ವ್ಯಾನಿಟಿ ಬ್ಯಾಗ್‌ನ ಜಿಪ್ ಓಪನ್ ಆಗಿರುವು ನಳಿನಾ ಅವರ ಗಮನಕ್ಕೆ ಬಂದಿತ್ತು. ಪರಿಶೀಲಿಸಿದಾಗ ಅದರೊಳಗೆ ಇಟ್ಟುಕೊಂಡಿದ್ದ ಚಿನ್ನದ ಸರ ನಾಪತ್ತೆಯಾಗಿತ್ತು ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಘಟನೆ ಸಂಬಂಧ ತುಂಗಾ ನಗರ ಪೊಲೀಸ್‌ ಠಾಣೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Sunrise Facility Services, Sri sai Trust Shimoga
📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion

Leave a Comment