ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಕುಂಸಿ: ತಂದೆಯ ಸಾವಿನ ದುಃಖದಲ್ಲಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯ ಮನವೊಲಿಸಿದ ಬಿಇಒ ರಮೇಶ್ ಹಾಗೂ ಶಾಲೆ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸದಸ್ಯರು, ಶನಿವಾರ ಆತನಿಂದ ಪರೀಕ್ಷೆ (exam) ಬರೆಸಿದ್ದಾರೆ.
ಸಮೀಪದ ದ್ಯಾವಿನಕೆರೆಯಲ್ಲಿ ಮಂಜುನಾಥ್ (45) ಗುರುವಾರ ಬೆಳಗ್ಗೆ ವಿಷ ಸೇವಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಸಂಜೆ ಮೃತಪಟ್ಟಿದ್ದರು. ತಂದೆಯ ಸಾವಿನ ದುಃಖದಲ್ಲಿದ್ದ ಪ್ರೀತಮ್ ನಾನು ಪರೀಕ್ಷೆ ಬರೆಯುವುದಿಲ್ಲ ಎಂದಿದ್ದ. ಈ ವಿಷಯವನ್ನು ಮಂಡಘಟ್ಟ ಸರ್ಕಾರಿ ಪ್ರೌಢಶಾಲೆಯ ಶಾಲೆಯ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಬಿಇಒ ರಮೇಶ್ ಅವರಿಗೆ ತಿಳಿಸಿದರು.

ತಕ್ಷಣ ವಿದ್ಯಾರ್ಥಿಯ ಮನೆಗೆ ಬಂದ ರಮೇಶ್ ಅವರು ವಿದ್ಯಾರ್ಥಿಯ ತಾಯಿಗೆ ಸಾಂತ್ವನ ಹೇಳಿ ಅವರದೆ ವಾಹನದಲ್ಲಿ ವಿದ್ಯಾರ್ಥಿ ಪ್ರೀತಮ್‌ನನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದು ಪರೀಕ್ಷೆ ಬರೆಯಿಸಿದ್ದಾರೆ.

ಪ್ರತಿಯೊಬ್ಬ ವಿದ್ಯಾರ್ಥಿಗೂ ಶಿಕ್ಷಣ ಒದಗಿಸುವುದು ಸಮಾಜದ ಕರ್ತವ್ಯ. ತಂದೆಯ ಸಾವಿನ ನೋವಿನಲ್ಲಿರುವ ವಿದ್ಯಾರ್ಥಿಗೆ ಧೈಯ್ಯ ತುಂಬಿ ಪರೀಕ್ಷೆಗೆ ಕರೆದುಕೊಂಡು ಹೋಗುತ್ತಿದ್ದೇವೆ. ವಿದ್ಯಾರ್ಥಿಗೆ ಮುಂದಿನ ಶೈಕ್ಷಣಿಕ ಸವಲತ್ತುಗಳನ್ನು ಕೊಡುವುದು ನಮ್ಮೆಲ್ಲರ ಕರ್ತವ್ಯ ಎಂದು ಬಿಇಒ ರಮೇಶ್ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ JDS ಕಾರ್ಯಕರ್ತರ ಸಭೆ, MLA ಮಹತ್ವದ ಸೂಚನೆ, ಏನದು?
ಈ ಸಂದರ್ಭ ಸೂಡೂರು ಶಿವಣ್ಣ, ಎಸ್‌ಡಿಎಂಸಿ ಅಧ್ಯಕ್ಷ ಮಂಜಪ್ಪ ಹಾಗೂ ಸದಸ್ಯರು, ಶಾಲೆ ಶಿಕ್ಷಕರು, ಗ್ರಾಮಸ್ಥರು ವಿದ್ಯಾರ್ಥಿಗೆ ಸಾಂತ್ವನ ಹೇಳಿ ಪರೀಕ್ಷೆಗೆ ಕಳುಹಿಸಿದರು.
LATEST NEWS
- ಶಿವಮೊಗ್ಗದ ಮೈಲಾರೇಶ್ವರ ದೇವಸ್ಥಾನದಲ್ಲಿ ನಾಗದರ್ಶನ, ದೊಡ್ಡ ಸಂಖ್ಯೆಯ ಭಕ್ತರು ಭಾಗಿ

- ಟಾಟಾ ಏಸ್, ಆಟೋ ಡಿಕ್ಕಿ, ಮಗು ಸೇರಿ ಹಲವರಿಗೆ ಗಾಯ

- ಮೀನು ಮಾರುಕಟ್ಟೆ ಬಳಿ ಕಿರಿಕ್, ಕಾರಿನ ಬೀಗದಿಂದ ವ್ಯಕ್ತಿಯ ಕಣ್ಣಿಗೆ ಹೊಡೆದು ಜೀವ ಬೆದರಿಕೆ, ಕಾರಣವೇನು?

- ಮಂಚಿಯ ಪುರಾಣ ಪ್ರಸಿದ್ಧ ಜಾತ್ರೆ, ಬುಡ ಸಹಿತ ಬಿಲ್ವಪತ್ರೆ ಮರ ಕಿತ್ತು ತಂದ ದಾಸರ ಕುಟುಂಬ

- ಅಡಿಕೆ ತೋಟದಲ್ಲಿ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಉಪನ್ಯಾಸಕರ ಮೃತದೇಹ ಪತ್ತೆ

About The Editor
ನಿತಿನ್ ಆರ್.ಕೈದೊಟ್ಲು














