ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ನವುಲೆಯ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದಲ್ಲಿ (hostel) ಮೂಲ ಸೌಕರ್ಯಗಳಿಲ್ಲದೆ ವಿದ್ಯಾರ್ಥಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಕೂಡಲೇ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದ್ದಾರೆ.
ಇದನ್ನೂ ಓದಿ : ಸ್ಕೀಮ್ ಹೆಸರಲ್ಲಿ ಸಾವಿರಾರು ಜನರಿಗೆ ವಂಚನೆ ಆರೋಪ, ಉಡುಪಿಯ ವ್ಯಕ್ತಿ ಅರೆಸ್ಟ್
ಹಾಸ್ಟೆಲ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಶೌಚಾಲಯ ಹಾಗೂ ಹಾಸ್ಟೆಲ್ ಆವರಣವು ಶುಚಿಯಾಗಿಲ್ಲ. ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳಿಗೆ ಓದಲು ಅಗತ್ಯ ಪುಸ್ತಕಗಳಿಲ್ಲ ಹಾಗೂ ಕ್ರೀಡಾ ಸಾಮಗ್ರಿಗಳ ಕೊರತೆ ಇದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಮಲಗಲು ಸರಿಯಾದ ಹಾಸಿಗೆಗಳಿಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಕಿಟಕಿಗಳಿಗೆ ಗಾಜುಗಳಿಲ್ಲ, ಫ್ಯಾನ್ ಮತ್ತು ಬಲ್ಬ್‌ಗಳು ಕೆಟ್ಟು ಹೋಗಿವೆ. ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ಸೊಳ್ಳೆ ಪರದೆಗಳ ವ್ಯವಸ್ಥೆಯೂ ಇಲ್ಲ. ಅಡುಗೆ ತಯಾರಿಯಲ್ಲಿ ಮೆನು ಪಟ್ಟಿಯನ್ನು ಪಾಲಿಸುತ್ತಿಲ್ಲ. ಸರಿಯಾದ ಸಮಯಕ್ಕೆ ಊಟ ನೀಡುತ್ತಿಲ್ಲ ಹಾಗೂ ಅಡುಗೆ ಸಿಬ್ಬಂದಿ ವಿದ್ಯಾರ್ಥಿಗಳೊಂದಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ದೂರಿದ್ದಾರೆ.
ಹಾಸ್ಟೆಲ್ ಆವರಣದಲ್ಲಿ ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿಲ್ಲ. ಹೈಮಾಸ್ಟ್ ಲೈಟ್ ಕೆಟ್ಟು ಹೋಗಿದ್ದು, ರಾತ್ರಿ ವೇಳೆ ವಿದ್ಯಾರ್ಥಿಗಳು ಕತ್ತಲಲ್ಲಿ ಓಡಾಡುವಂತಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

LATEST NEWS
- ಶಿವಮೊಗ್ಗ ಜಿಲ್ಲೆಯ ಮನೆ ಮನೆಗೂ ಭೇಟಿ ನೀಡ್ತಾರೆ ಗಣತಿದಾರರು, ಏನೇನು ಮಾಹಿತಿ ಕೊಡಬೇಕು?

- ಕೇಕ್, ಬಿಸ್ಕತ್ತು, ಕುಕೀಸ್ ತಯಾರಿಸೋದು ಹೇಗೆ? ಶಿವಮೊಗ್ಗದಲ್ಲಿ ಬೇಕರಿ ಉತ್ಪನ್ನಗಳ ತಯಾರಿ ತರಬೇತಿ

- ಹೊಸಹಳ್ಳಿ ಬಳಿ ಅಪಘಾತ, ಗಾಜನೂರು ನಿವಾಸಿಗೆ ಗಂಭೀರ ಗಾಯ, ಹೇಗಾಯ್ತು ಘಟನೆ?

- ಕಾರಿನಲ್ಲಿ ದಿಢೀರ್ ಬೆಂಕಿ, ಕೆಲವೇ ಕ್ಷಣದಲ್ಲಿ ಮುಂಭಾಗ ಆಹುತಿ

- ಜಯನಗರ ಪೊಲೀಸ್ ಠಾಣೆಯಲ್ಲಿ 8 ವಾಹನಗಳ ಹರಾಜು, ದಿನಾಂಕ ಪ್ರಕಟ

About The Editor
ನಿತಿನ್ ಆರ್.ಕೈದೊಟ್ಲು














