ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಶಿವಮೊಗ್ಗ ನಗರದ ಗೋಪಾಳದಲ್ಲಿರುವ ಜಿಲ್ಲಾ ಕ್ರೀಡಾ ಸಂಕೀರ್ಣದಲ್ಲಿ ಎರಡು ಹಂತಗಳಲ್ಲಿ ಬೇಸಿಗೆ ಶಿಬಿರ (summer sports) ಹಮ್ಮಿಕೊಂಡಿದೆ.
ಶಿಬಿರದಲ್ಲಿ ಈಜು, ಸ್ಟೇಟಿಂಗ್ ಮತ್ತು ಲಾನ್ ಟೆನಿಸ್ ಹೇಳಿ ಕೊಡಲಾಗುವುದು. ಮೊದಲ ಶಿಬಿರ ಏಪ್ರಿಲ್ 1ರಿಂದ 24ರವರೆಗೆ ನಡೆಯಲಿದೆ. ಎರಡನೇ ಶಿಬಿರ ಏ.30ರಿಂದ ಮೇ 24ರವರೆಗೆ ನಡೆಯಲಿದೆ. ಈಜು ಕಲಿಯಲು 4 ವರ್ಷದಿಂದ ಎಲ್ಲ ವಯಸ್ಸಿನವರಿಗೆ ಅವಕಾಶವಿದೆ. ಸ್ಟೇಟಿಂಗ್ 5 ರಿಂದ 15 ವರ್ಷದ ಎಲ್ಲ ಮಕ್ಕಳಿಗೆ ಮತ್ತು ಲಾನ್ ಟೆನಿಸ್ ಅನ್ನು 6 ವರ್ಷದವರಿಂದ ಎಲ್ಲ ವಯಸ್ಸಿನವರಿಗೆ ಹೇಳಿಕೊಡಲಾಗುವುದು. ಬೆಳಗ್ಗೆ 6 ರಿಂದ 10 ಮತ್ತು ಸಂಜೆ 4 ರಿಂದ 7ರವರೆಗೆ ಶಿಬಿರ ನಡೆಯಲಿದೆ. ಪ್ರತಿ ಸೋಮವಾರ ರಜೆ ಇರುತ್ತದೆ.
ಇದನ್ನೂ ಓದಿ : ಲಾರಿಯ ಚಕ್ರದಡಿ ಸಿಲುಕಿ ದಂಪತಿ ಸಾವು, ಹೇಗಾಯ್ತು ಘಟನೆ?
ಪ್ರತಿ ಕ್ರೀಡೆಗೆ ₹2,250 ಶುಲ್ಕ ನಿಗದಿಪಡಿಸಲಾಗಿದೆ. ಸರ್ಕಾರಿ ಶಾಲೆ ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಶೇ.50 ರಿಯಾಯಿತಿ ಇರಲಿದೆ. ಹೆಚ್ಚಿನ ಮಾಹಿತಿಗೆ ಮೊಬೈಲ್: 9743820293, ಈಜು : 9743820293, ಸ್ಕೇಟಿಂಗ್ : 7760921936, ಲಾನ್ ಟೆನಿಸ್ : 8374335635 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LATEST NEWS
- ಯಶವಂತಪುರ – ತಾಳಗುಪ್ಪ ಮಧ್ಯೆ ವಿಶೇಷ ರೈಲು, ಎಷ್ಟು ಬೋಗಿ ಇರುತ್ತೆ? ಎಲ್ಲೆಲ್ಲಿದೆ ಸ್ಟಾಪ್?

- ಶಿವಮೊಗ್ಗ ಜಿಲ್ಲೆಯ ಮನೆ ಮನೆಗೂ ಭೇಟಿ ನೀಡ್ತಾರೆ ಗಣತಿದಾರರು, ಏನೇನು ಮಾಹಿತಿ ಕೊಡಬೇಕು?

- ಕೇಕ್, ಬಿಸ್ಕತ್ತು, ಕುಕೀಸ್ ತಯಾರಿಸೋದು ಹೇಗೆ? ಶಿವಮೊಗ್ಗದಲ್ಲಿ ಬೇಕರಿ ಉತ್ಪನ್ನಗಳ ತಯಾರಿ ತರಬೇತಿ

- ಹೊಸಹಳ್ಳಿ ಬಳಿ ಅಪಘಾತ, ಗಾಜನೂರು ನಿವಾಸಿಗೆ ಗಂಭೀರ ಗಾಯ, ಹೇಗಾಯ್ತು ಘಟನೆ?

- ಕಾರಿನಲ್ಲಿ ದಿಢೀರ್ ಬೆಂಕಿ, ಕೆಲವೇ ಕ್ಷಣದಲ್ಲಿ ಮುಂಭಾಗ ಆಹುತಿ

About The Editor
ನಿತಿನ್ ಆರ್.ಕೈದೊಟ್ಲು















