ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಮಣೂರು ಗೋವಿಂದರಾಯಪ್ರಭು ಚಾರಿಟಬಲ್ ಟ್ರಸ್ಟ್‌ನಿಂದ ಏ.9ರಂದು ಸಂಜೆ 5.30ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ಗಾಯಕಿ ಶಿವಶ್ರೀ ತೇಜಸ್ವಿಸೂರ್ಯ ಅವರಿಂದ ಭಕ್ತಿ ಸಂಗೀತದ ಕಾರ್ಯಕ್ರಮ (concert) ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಆಯೋಜಕ ವಿನಯ್ ತಿಳಿಸಿದರು.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಶ್ರೀ ಅವರ ಭಕ್ತಿ ಸಂಗೀತದ ಕಾರ್ಯಕ್ರಮವನ್ನು ನಾಮಾಮೃತ ಹೆಸರಿನಲ್ಲಿ ಆಯೋಜಿಸಲಾಗಿದೆ. ಪಂಚತಾರ ಐಸ್‌ಕ್ರೀಮ್ಸ್ ಸಂಸ್ಥೆಯ ಮಾಲೀಕ ಪ್ರಕಾಶ್ ಪ್ರಭು ನೇತೃತ್ವದಲ್ಲಿ ದಿವಂಗತ ಮಣೂರು ಗೋವಿಂದರಾಯ ಪ್ರಭು ಚಾರಿಟಬಲ್ ಟ್ರಸ್ಟ್‌ನಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಿವಶ್ರೀ ಅವರ ತಂದೆ ಸ್ಕಂದ ಪ್ರಸಾದ್ ಗಾಯನದಲ್ಲಿ ಜತೆ ನೀಡಲಿದ್ದಾರೆ. ಗೌರವ್ ಗಡಿಯಾರ್ ಹಾರ್ಮೋನಿಯಂ, ಮೃದಂಗದಲ್ಲಿ ಅನಿರುದ್ಧ ಭಟ್ ಹಾಗೂ ತಬಲಾದಲ್ಲಿ ಪ್ರದ್ಯುಮ್ನ ಕರ್ಪೂರ ಸಾಥ್ ನೀಡಲಿದ್ದಾರೆ ಎಂದು ತಿಳಿಸಿದರು.

ಶಿವಶ್ರೀ ಎಲ್ಲ ರೀತಿಯ ಸಂಗೀತವನ್ನೂ ಹಾಡುವ ಸಾಮರ್ಥ್ಯ ಹೊಂದಿದ್ದಾರೆ. ಭಕ್ತಿ ಸಂಗೀತ, ಭಜನೆ, ದೇವರ ನಾಮಾವಳಿ, ದಾಸರ ಪದಗಳನ್ನು ವಿಶೇಷವಾಗಿ ಹಾಡುತ್ತಾರೆ. ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ವೇಳೆ ಪ್ರಧಾನಿ ಮೋದಿಯವರು ಶಿವಶ್ರೀ ತೇಜಸ್ವಿಸೂರ್ಯ ಅವರ ಗಾಯನವನ್ನು ಮೆಚ್ಚಿದ್ದರು ಎಂದರು.
ಇದನ್ನೂ ಓದಿ : ಶಿವಮೊಗ್ಗ, ಶಿಕಾರಿಪುರ, ಸಾಗರದ ಐದು ಕಡೆ ಲೋಕಾಯುಕ್ತ ದಾಳಿ, ಪರಿಶೀಲನೆ

LATEST NEWS
- ಉದ್ಯೋಗ ಸುದ್ದಿ: ಪಿಯುಸಿ, ಪದವಿ ಆದವರಿಗೆ ಕೆಲಸವಿದೆ, ಏ.9ರಂದು ನೇರ ಸಂದರ್ಶನ, ಎಲ್ಲಿ?

- ಬಂಕ್ ಮಾಲೀಕರಿಗೆ ಶಿವಮೊಗ್ಗ ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ, ಏನಿದು?

- ಇವತ್ತು ರಾಶಿ, ಗೊರಬಲು ಅಡಿಕೆ ರೇಟ್ ಎಷ್ಟಿದೆ? – ಇಲ್ಲಿದೆ ಇಂದಿನ ಅಡಿಕೆ ಧಾರಣೆ

- ಆರು ಕಾಲುಗಳ ಕರು ಜನನ, ನೋಡಲು ದೌಡಾಯಿಸಿದ ಜನ

- ದುರ್ಗಿಗುಡಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ, ಯಾವಾಗ? ಯಾರಿಗೆಲ್ಲ ಅವಕಾಶವಿದೆ?

About The Editor
ನಿತಿನ್ ಆರ್.ಕೈದೊಟ್ಲು










