ಅರ್ಧ ಬೆಲೆಗೆ ಚಿನ್ನ, ಶಿವಮೊಗ್ಗದ ಬುಳ್ಳಾಪುರದ ತೆಂಗಿನ ತೋಟದಲ್ಲಿ ಆಗಿದ್ದೇನು?

ಶಿವಮೊಗ್ಗ: ಬಂಗಾರದ ನಾಣ್ಯಗಳನ್ನು ಕಡಿಮೆ ಬೆಲೆಗೆ ನೀಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ₹2.50 ಲಕ್ಷ ಪಡೆದು ನಕಲಿ ನಾಣ್ಯಗಳನ್ನು (gold coin) ನೀಡಿ ವಂಚಿಸಲಾಗಿದೆ. ಶಿವಮೊಗ್ಗ ತಾಲೂಕು ಬುಳ್ಳಾಪುರ ಗ್ರಾಮದಲ್ಲಿ ಘಟನೆ ನಡೆದಿದೆ.➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಹಾವೇರಿ ಜಿಲ್ಲೆಯ ಮಂಜನಗೌಡ ಎಂಬುವವರು ವಂಚನೆಗೊಳಗಾಗಿದ್ದಾರೆ. ಮಂಜನಗೌಡ ಅವರು ಚಿಕಿತ್ಸೆಗೆಂದು ಶಿವಮೊಗ್ಗದ ಖಾಸಗಿ ಆಸ್ಪತ್ರೆಯೊಂದಕ್ಕೆ ಬಂದಿದ್ದರು. ಈ ಸಂದರ್ಭ ರಮೇಶ ಎಂಬಾತನ ಪರಿಚಿಯವಾಗಿ ಮೊಬೈಲ್‌ ನಂಬರ್‌ ಪಡೆದುಕೊಂಡಿದ್ದರು. ರಮೇಶ್‌ ತಮ್ಮೂರಿನ ಅಜ್ಜನಿಗೆ 5 ಕೆಜಿ ಚಿನ್ನದ ನಾಣ್ಯ ಸಿಕ್ಕಿವೆ. ಅರ್ಧ ಬೆಲೆಗೆ ಕೊಡಿಸುವುದಾಗಿ ಮಂಜನಗೌಡರಿಗೆ ನಂಬಿಸಿದ್ದಾನೆ.

301123-Shimoga-Rural-Police-Station.webp

ಇದನ್ನೂ ಓದಿ : ಎದುರು ಮನೆಗೆ ನುಗ್ಗಿದ್ದ ಭದ್ರಾವತಿ ವ್ಯಕ್ತಿಗೆ ಜೈಲು, ದಂಡ, ಎಷ್ಟು ವರ್ಷ ಶಿಕ್ಷೆ?

ಇದನ್ನು ನಂಬಿದ ಮಂಜನಗೌಡ ಅವರು ಬುಳ್ಳಾಪುರಕ್ಕೆ ಬಂದಿದ್ದರು. ಅಲ್ಲಿ ರಮೇಶನ ಅಣ್ಣ ಹಾಗೂ ಮತ್ತೊಬ್ಬ ವ್ಯಕ್ತಿಗೆ ಒಟ್ಟು ₹2.50 ಲಕ್ಷ ಹಣ ನೀಡಿ ನಾಣ್ಯಗಳನ್ನು ಪಡೆದುಕೊಂಡಿದ್ದರು. ಊರಿಗೆ ಹೋಗಿ ಪರೀಕ್ಷಿಸಿದಾಗ ಆ ನಾಣ್ಯಗಳು ನಕಲಿ ಎಂದು ತಿಳಿದುಬಂದಿವೆ.

301123-Shimoga-Rural-Police-Station.webp

ಘಟನೆ ಸಂಬಂಧ ರಮೇಶ, ಆತನ ಅಣ್ಣ ಹಾಗೂ ಅಜ್ಜನ ವಿರುದ್ಧ ಮಂಜನಗೌಡ ದೂರು ನೀಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Comment