ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ತಾಲೂಕಿನ ಸೂಗೂರು ಗ್ರಾಮದಲ್ಲಿ ಹಸುವೊಂದು ಆರು ಕಾಲುಗಳಿರುವ ಕರುವಿಗೆ (calf) ಜನ್ಮ ನೀಡಿದೆ. ಗ್ರಾಮದ ರೈತ ಹನುಮಂತಪ್ಪ ಎಂಬುವವರಿಗೆ ಸೇರಿದ ಹಸು ಈ ವಿಚಿತ್ರ ಕರುವನ್ನ ಹಾಕಿದ್ದು, ಜನರಲ್ಲಿ ಕುತೂಹಲ ಮೂಡಿಸಿದೆ.
ಈ ಕರುವು ತನ್ನ ಹಿಂಬದಿಯಲ್ಲಿ ಸಾಮಾನ್ಯ ಎರಡು ಕಾಲುಗಳ ಬದಲಾಗಿ ಹೆಚ್ಚುವರಿ ಎರಡು ಕಾಲುಗಳನ್ನು ಹೊಂದಿದೆ. ಈ ಹೆಚ್ಚುವರಿ ಕಾಲುಗಳ ಕಾರಣದಿಂದ ಕರುವು ನಿಲ್ಲಲು ಹರಸಾಹಸ ಪಡುತ್ತಿದೆ. ಕರು ಹಾಕುವ ಸಮಯದಲ್ಲಿ ಹಸು ತೀವ್ರವಾಗಿ ಒದ್ದಾಡುತ್ತಿದ್ದುದನ್ನು ಗಮನಿಸಿದ ರೈತರು ಕೂಡಲೇ ಪಶುವೈದ್ಯರನ್ನು ಸಂಪರ್ಕಿಸಿದ್ದಾರೆ.

ಪಶುವೈದ್ಯರು ಕರುವನ್ನ ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಸದ್ಯ ಆರು ಕಾಲುಗಳ ಈ ಕರು ಮತ್ತು ತಾಯಿ ಹಸು ಎರಡೂ ಆರೋಗ್ಯವಾಗಿವೆ. ಈ ಅಪರೂಪದ ಕರುವನ್ನ ನೋಡಲು ಸುತ್ತಮುತ್ತಲ ಗ್ರಾಮಸ್ಥರು ಹನುಮಂತಪ್ಪ ಅವರ ಮನೆಯತ್ತ ದೌಡಾಯಿಸುತ್ತಿದ್ದಾರೆ.
ಇದನ್ನೂ ಓದಿ : ಅರ್ಧ ಬೆಲೆಗೆ ಚಿನ್ನ, ಶಿವಮೊಗ್ಗದ ಬುಳ್ಳಾಪುರದ ತೆಂಗಿನ ತೋಟದಲ್ಲಿ ಆಗಿದ್ದೇನು?

LATEST NEWS
- ಶಿವಮೊಗ್ಗ ಜಿಲ್ಲಾಧಿಕಾರಿ ದಿಢೀರ್ ಭೇಟಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಹಾಸ್ಟೆಲ್‌ನಲ್ಲಿ ಪರಿಶೀಲನೆ

- ಆಗುಂಬೆ ಸಮೀಪ ಕಾರು ಡಿಕ್ಕಿ, ವ್ಯಕ್ತಿ ಸ್ಥಳದಲ್ಲೆ ಸಾವು, ಹೇಗಾಯ್ತು ಘಟನೆ?

- ಶಿವಮೊಗ್ಗದಲ್ಲಿ ಮಹಿಳಾ ನೌಕರರಿಗೆ ಕ್ರೀಡೆ, ಮನರಂಜನಾ ಸ್ಪರ್ಧೆಗಳು, ಯಾವ್ಯಾವ ಸ್ಪರ್ಧೆಗಳಿವೆ?

- ಉದ್ಯೋಗ ಸುದ್ದಿ: ಪಿಯುಸಿ, ಪದವಿ ಆದವರಿಗೆ ಕೆಲಸವಿದೆ, ಏ.9ರಂದು ನೇರ ಸಂದರ್ಶನ, ಎಲ್ಲಿ?

- ಬಂಕ್ ಮಾಲೀಕರಿಗೆ ಶಿವಮೊಗ್ಗ ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ, ಏನಿದು?

About The Editor
ನಿತಿನ್ ಆರ್.ಕೈದೊಟ್ಲು










