ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶೋಭಾ.ಕೆ.ಆರ್ ಅವರಿಗೆ ಸಂಬಂಧಿಸಿದ ಆರು ಕಡೆಗಳಲ್ಲಿ ಇವತ್ತು ಲೋಕಾಯುಕ್ತ ದಾಳಿ ನಡೆಸಲಾಯಿತು. ದಾಳಿ ಮುಕ್ತಾಯವಾಗಿದ್ದು, ₹3.88 ಕೋಟಿ ಮೌಲ್ಯದ ಆದಾಯಕ್ಕು ಮೀರಿದ ಆಸ್ತಿ ಪತ್ತೆಯಾಗಿದೆ ಎಂದು ಲೋಕಾಯುಕ್ತ (Lokayukta) ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಶೋಭಾ ಬಳಿ ಏನೇನೆಲ್ಲ ಪತ್ತೆಯಾಯ್ತು?
ಲೋಕಾಯುಕ್ತ ದಾಳಿ ವೇಳೆ ಶೋಭಾ ಅವರ ಬಳಿ 2 ನಿವೇಶನ, 1 ವಾಸದ ಮನೆ, 4.08 ಎಕರೆ ಕೃಷಿ ಜಮೀನು ಪತ್ತೆಯಾಗಿದೆ. ಇವುಗಳ ಮೌಲ್ಯ ₹1,76,38,000 ಎಂದು ಅಂದಾಜಿಸಲಾಗಿದೆ.

ಇನ್ನು ₹1,63,500 ನಗದು, 57,40,000 ಮೌಲ್ಯದ ಚಿನ್ನಾಭರಣ, ₹1,23,20,000 ಮೌಲ್ಯದ ವಾಹನಗಳು, ₹30,21,435 ಮೌಲ್ಯದ ಇತರೆ ವಸ್ತುಗಳು ಪತ್ತೆಯಾಗಿವೆ. ಚರ ಆಸ್ತಿಯ ಒಟ್ಟು ಮೌಲ್ಯ ₹2,12,44,935 ಎಂದು ಅಂದಾಜಿಸಲಾಗಿದೆ. ಅದಾಯಕ್ಕು ಮೀರಿದ ಆಸ್ತಿ ಪತ್ತೆಯಾದ ಹಿನ್ನೆಲೆ ಶಿವಮೊಗ್ಗ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಶಿವಮೊಗ್ಗದಲ್ಲಿ ಕೆಎಎಸ್ ಅಧಿಕಾರಿ ಸೇರಿ ಇಬ್ಬರು ಲೋಕಾಯುಕ್ತ ಬಲೆಗೆ, ಆಗಿದ್ದೇನು?

LATEST NEWS
- ಭದ್ರಾವತಿಯಲ್ಲಿ ತವರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ

- ಸೂಳೆಬೈಲಿನಲ್ಲಿ ಶೆಡ್ ಮೇಲೆ ತುಂಗಾ ನಗರ ಠಾಣೆ ಪೊಲೀಸರ ದಾಳಿ, ದಾಖಲಾಯ್ತು ಕೇಸ್

- ಹಿಟ್ಟೂರು ಸರ್ಕಲ್‌ನಲ್ಲಿ ಬೈಕುಗಳು ಡಿಕ್ಕಿ, ಹೇಗಾಯ್ತು ಘಟನೆ?

- ಕೆನರಾ ಬ್ಯಾಂಕ್ ವಿರುದ್ಧ ಹೋರಾಡಿ ಗೆದ್ದ ಹೊಸನಗರದ ಗ್ರಾಹಕ, ಏನಿದು ಕೇಸ್?

- ಶಿವಮೊಗ್ಗದ 6 ಕಡೆ ಲೋಕಾಯುಕ್ತ ದಾಳಿ, ಅಧಿಕಾರಿ ಶೋಭಾ ಬಳಿ ಏನೇನೆಲ್ಲ ಸಿಕ್ತು? ಇಲ್ಲಿದೆ ಡಿಟೇಲ್ಸ್

About The Editor
ನಿತಿನ್ ಆರ್.ಕೈದೊಟ್ಲು










