ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಹಿರಿಯ ಸಹಕಾರಿ ಉಂಬ್ಳೇಬೈಲು ಮೋಹನ್ ಅವರ ಬದುಕಿನ ಪಯಣ ಸಾರುವ ಅಭಿನಂದನಾ ಗ್ರಂಥ (book) ‘ಸಾರ್ಥಕ’ದ ಲೋಕಾರ್ಪಣೆ ಮತ್ತು ಅಭಿನಂದನಾ ಸಮಾರಂಭವನ್ನು ಏ.13ರಂದು ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಬಿ. ರಮೇಶ್ ಹೆಗ್ಡೆ ತಿಳಿಸಿದರು.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಂಬ್ಳೇಬೈಲು ಮೋಹನ್ ಅಭಿನಂದನಾ ಸಮಿತಿ ಮತ್ತು ಅಸ್ಮಿತಾ ಫೌಂಡೇಶನ್ ವತಿಯಿಂದ ಅಂದು ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಸದ ಬಿ.ವೈ.ರಾಘವೇಂದ್ರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಡಾ. ಪಿ.ಜಿ.ಆರ್.ಸಿಂಧ್ಯ ಆಶಯ ನುಡಿ ನುಡಿಯಲಿದ್ದಾರೆ. ಡಾ. ಬಿ.ಎಲ್.ಶಂಕರ್ ಅಭಿನಂದನಾ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಮಾಜಿ ಶಾಸಕ ಮಹಿಮಾ ಪಟೇಲ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವಾನಿ ವಿಜಯದೇವ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಂ.ಬಿ.ಚನ್ನಬೀರಪ್ಪ, ತೋಟಗಾರಿಕೆ ಮಹಾ ಮಂಡಳಿ ಮಾಜಿ ಅಧ್ಯಕ್ಷ ಬಿ.ಡಿ.ಭೂಕಾಂತ್, ಉದ್ಯಮಿ ಡಾ.ಕಡಿದಾಳು ಗೋಪಾಲ್, ನಿವೃತ್ತ ಪ್ರಾಂಶುಪಾಲ ಪ್ರೊ. ಜೆ.ಎಲ್.ಪದ್ಮನಾಭ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಎ.ರಮೇಶ್ ಹೆಗ್ಡೆ, ಅಭಿನಂದನಾ ಪುಸ್ತಕದ ಸಂಪಾದಕ, ಅಸ್ಮಿತೆ ಫೌಂಡೇಶನ್ ನಿರ್ದೇಶಕ ಡಾ. ಸಚಿನ್.ಬಿ.ಎಸ್, ಸುವ್ವಿ ಪ್ರಕಾಶನದ ಸುನಿಲ್ ಕುಮಾರ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಅಂದು ಬೆಳಗ್ಗೆ 10 ಗಂಟೆಗೆ ಸುಧಿಗೌಡ ಮತ್ತು ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ ಇರಲಿದೆ.
ಸುದ್ದಿಗೋಷ್ಠಿಯಲ್ಲಿ ರಮೇಶ್ ನಾಯ್ಕ, ಉಮೇಶ್, ಸುಧಾಕರ್, ಕಾಂತರಾಜ್ ಇದ್ದರು.
ಇದನ್ನೂ ಓದಿ : IPL ಟಿಕೆಟ್ ವಿಚಾರ, ಸಭಾಧ್ಯಕ್ಷರಿಗೆ ಪತ್ರ ಬರೆದ ಶಿವಮೊಗ್ಗ MLA, ಏನಿದೆ ಪತ್ರದಲ್ಲಿ?

LATEST NEWS
- Three killed, several injured in soil cave-in at Hulikal Ghat

- BREAKING NEWS – ಹುಲಿಕಲ್ ಘಾಟಿಯಲ್ಲಿ ಘೋರ ದುರ್ಘಟನೆ, ಕಾರ್ಮಿಕರು ಸಾವು

- PU RESULT: ಶಿವಮೊಗ್ಗದ ಮಹೀನ್ ಖಾನಮ್ ಅಫ್ರಿದಿ ಮನೆಯಲ್ಲಿ ಸಂಭ್ರಮ, ಪಡೆದ ಅಂಕಗಳೆಷ್ಟು?

- ಇವತ್ತಿನ ಅಡಿಕೆ ರೇಟ್, ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿಯಲ್ಲಿ ಎಷ್ಟಿದೆ ಅಡಿಕೆ ಧಾರಣೆ?

- ಶಿವಮೊಗ್ಗ ಜಿಲ್ಲೆಯಲ್ಲಿ ಯುವನಿಧಿ ಪ್ರಚಾರ, ಯಾವ್ಯಾವ ದಿನ ಯಾವ್ಯಾವ ಕಾಲೇಜಿನಲ್ಲಿ ಕಾರ್ಯಕ್ರಮ?

About The Editor
ನಿತಿನ್ ಆರ್.ಕೈದೊಟ್ಲು











