ಆಟೋ ಚಾಲಕರನ್ನು ರಕ್ಷಿಸಿ, ಶಿವಮೊಗ್ಗ ಜಿಲ್ಲಾಧಿಕಾರಿ ಭೇಟಿಯಾಗಿ ಮನವಿ ಸಲ್ಲಿಕೆ, ಕಾರಣವೇನು?

ಶಿವಮೊಗ್ಗ: ಜಿಲ್ಲೆಯ ಗ್ಯಾಸ್ ಬಂಕ್‌ಗಳಲ್ಲಿ ಮನಸ್ಸಿಗೆ ಬಂದ ಹಾಗೆ ಸಿಎನ್‌ಜಿ ದರ (CNG prices) ನಿಗದಿ ಮಾಡಿ ಆಟೋ ಚಾಲಕರಿಂದ ಸುಲಿಗೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ಕಟ್ಟಡ ಕಾರ್ಮಿಕರ ಮತ್ತು ಅಸಂಘಟಿತ ಕಾರ್ಮಿಕರ ಹಿತರಕ್ಷಣಾ ವೇದಿಕೆಯಿಂದ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಲಾಯಿತು.

ನಿತ್ಯ ಸಿಎನ್‌ಜಿ ದರ ಏರಿಕೆ ಆಗುತ್ತಲೇ ಇದೆ. ಈ ಬಗ್ಗೆ ಇಲ್ಲಿಯವರೆಗೂ ಸ್ಥಳೀಯ ಜನಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ. ಆಟೊಗಳ ಎಫ್.ಸಿ ದರ ಮೂರು ಪಟ್ಟು, ಇನ್ಸೂರೆನ್ಸ್ ಮೊತ್ತ, ಬಿಡಿಭಾಗಗಳು, ಮೆಕಾನಿಕ್ ದರ ದುಪ್ಪಟ್ಟು ಏರಿಕೆಯಾಗಿವೆ.

Auto-Drivers-memorandum-to-Shimoga-DC.

Auto-Drivers-memorandum-to-Shimoga-DC.

ಇನ್ನೊಂದೆಡೆ ಹಾಲು, ತರಕಾರಿ, ಅಕ್ಕಿ, ದಿನಸಿ ಪದಾರ್ಥ ಸೇರಿ ಪ್ರತಿಯೊಂದರ ದರವೂ ಹೆಚ್ಚಾಗಿದೆ. ಜೀವನ ಮಾಡುವುದು ಕಷ್ಟವಾಗಿದೆ. ಆಟೋ ಚಾಲಕರ ಬದುಕು ದುಸ್ತರವಾಗಿದೆ. ಬಂಕ್‌ ಗಳಲ್ಲಿ ಬೇಕಾ ಬಿಟ್ಟಿ ಗ್ಯಾಸ್ ದರ ಹೆಚ್ಚಳವಾಗುತ್ತಿರುವುದಕ್ಕೆ ಕಡಿವಾಣ ಹಾಕಿ ನಮ್ಮನ್ನು ರಕ್ಷಿಸಿ ಎಂದು ಮನವಿ ಮಾಡಿದರು.

ಇದನ್ನೂ ಓದಿ : ಬಂಕ್‌ ಮಾಲೀಕರಿಗೆ ಶಿವಮೊಗ್ಗ ಜಿಲ್ಲಾಧಿಕಾರಿ ಖಡಕ್‌ ಎಚ್ಚರಿಕೆ, ಏನಿದು?

Kalleshwara-Enterprises.webp
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment