ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ತಮ್ಮ ತಾಯಿ ಮೈತ್ರಾದೇವಿ ಬಿ.ಎಸ್. ಯಡಿಯೂರಪ್ಪ ಅವರ ಸ್ಮರಣಾರ್ಥ ಚಿನ್ನದ ಪದಕ (gold medal) ನೀಡಲು ದತ್ತಿನಿಧಿ ಸ್ಥಾಪಿಸಿರುವುದಾಗಿ ಸಂಸದ ಬಿ.ವೈ. ರಾಘವೇಂದ್ರ ಅವರು ತಿಳಿಸಿದ್ದಾರೆ.
ಈ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಸಂಸದ ಬಿ.ವೈ.ರಾಘವೇಂದ್ರ, ಕುವೆಂಪು ವಿಶ್ವವಿದ್ಯಾಲಯವು ನನಗೆ ಶಿಕ್ಷಣ ನೀಡಿ ಬೆಳೆಸಿದ ದೇವಸ್ಥಾನವಿದ್ದಂತೆ. ನಾನು ಇಲ್ಲಿನ ವಿದ್ಯಾರ್ಥಿಯಾಗಿ, ಸೆನೆಟ್ ಸದಸ್ಯನಾಗಿದ್ದೆ. ಈ ಸಂಸ್ಥೆಯ ಋಣ ತೀರಿಸುವ ಸಣ್ಣ ಪ್ರಯತ್ನವಾಗಿ, ಪರಿಸರ ವಿಜ್ಞಾನ ವಿಭಾಗದ ಎಂ.ಎಸ್ಸಿ ಪದವಿಯ ಕಿರು ಸಂಶೋಧನಾ ಯೋಜನೆಯಲ್ಲಿ ಸಾಧನೆ ಮಾಡುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಇದನ್ನೂ ಓದಿ : ಹುಲಿಕಲ್ ಘಾಟಿ: ಎಲ್ಲಾ ವಾಹನ ಸಂಚಾರ ಬಂದ್, ಪರ್ಯಾಯ ಮಾರ್ಗ ಪ್ರಕಟ
ಪರಿಸರ ಸಂರಕ್ಷಣೆ ಅತ್ಯಂತ ಅವಶ್ಯಕವಾಗಿದೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಹಸ್ತಾಂತರಿಸುವುದು ನಮ್ಮೆಲ್ಲರ ಹೊಣೆ. ಈ ನಿಟ್ಟಿನಲ್ಲಿ ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮೈತ್ರಾದೇವಿ ಬಿ.ಎಸ್.ಯಡಿಯೂರಪ್ಪ ಅವರ ಹೆಸರಿನಲ್ಲಿ ಚಿನ್ನದ ಪದಕವನ್ನು ನೀಡಲಾಗುತ್ತಿದೆ ಎಂದರು.

ಸೌರ ವಿದ್ಯುತ್ ಘಟಕ
ಇನ್ನು, ಕುವೆಂಪು ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ 1000 ಮೆಗಾವ್ಯಾಟ್ ಸೌರ ವಿದ್ಯುತ್ ಘಟಕ ಸ್ಥಾಪಿಸಲು ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಕ್ರಮ ವಹಿಸಲಾಗುವುದು. ಕುವೆಂಪು ವಿವಿಯನ್ನು ಸಂಪೂರ್ಣ ಹಸಿರು ಇಂಧನ ಕ್ಯಾಂಪಸ್ ಆಗಿ ಪರಿವರ್ತಿಸುವುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದರು.

LATEST NEWS
About The Editor
ನಿತಿನ್ ಆರ್.ಕೈದೊಟ್ಲು













