ಮೇಯಲು ಹೋಗಿದ್ದು 3 ಹಸು, ವಾಪಾಸ್ಸಾಗಿದ್ದು ಒಂದೇ, ರಾತ್ರಿ ಮನೆಯಿಂದ ಅದೂ ನಾಪತ್ತೆ, ಆಗಿದ್ದೇನು?

ಶಿವಮೊಗ್ಗ: ಗೋಪಾಳದಲ್ಲಿ ಮೂರು ಹಸುಗಳು ಕಳ್ಳತನವಾಗಿವೆ (cattle theft). ಸ್ವಾಮಿ ವಿವೇಕಾನಂದ ಬಡಾವಣೆಯ ನಿವಾಸಿ ರಾಘವೇಂದ್ರ ಎಂಬುವವರಿಗೆ ಸೇರಿದ ಹಸುಗಳು ಕಳವಾಗಿವೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. (ಈ ಸುದ್ದಿಯನ್ನು ಇನ್ನು 37 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ರಾಘವೇಂದ್ರ ಅವರು ತಮ್ಮ ಹಸುಗಳನ್ನು ಮೇಯಲು ಬಿಟ್ಟಿದ್ದಾಗ ಅವು ವಾಪಸ್ ಮನೆಗೆ ಬಂದಿಲ್ಲ. ಇದರಲ್ಲಿ ಒಂದು ಕಪ್ಪು ಬಣ್ಣದ ಎಚ್‌ಎಫ್ ಹಸು ಹಾಗೂ ಮತ್ತೊಂದು ಬ್ರೌನ್ ಬಣ್ಣದ ಜೆಸ್ಸಿ ಹಸುವಾಗಿದ್ದು, ಇವುಗಳ ಒಟ್ಟು ಮೌಲ್ಯ ಸುಮಾರು ₹80,000 ಎಂದು ಅಂದಾಜಿಸಲಾಗಿದೆ. ಕಳೆದುಹೋದ ಹಸುಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾಗಲೇ ರಾತ್ರಿ ಮನೆಯ ಮುಂದೆ ಮಲಗಿದ್ದ ಮತ್ತೊಂದು ಜೆಸ್ಸಿ ಹಸು ಕೂಡ ನಾಪತ್ತೆಯಾಗಿದೆ.

070426-Tunga-Nagara-Police-Station-General-Image.avif

070426-Tunga-Nagara-Police-Station-General-Image.avif

ಸುಮಾರು ₹1.20 ಲಕ್ಷ ಮೌಲ್ಯದ ಒಟ್ಟು ಮೂರು ಹಸುಗಳನ್ನು ಕಳ್ಳತನ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ತುಂಗಾ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

ಇದನ್ನೂ ಓದಿ : ಕುಟುಂಬದವರೆಲ್ಲ ಕೊಳ್ಳೆಗಾಲದಲ್ಲಿದ್ದಾಗ ಗಾಜನೂರಿನ ಮನೆಯಲ್ಲಿ ಲಕ್ಷ ಲಕ್ಷದ ಚಿನ್ನಾಭರಣ ಮಾಯ

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Leave a Comment