ಸರ್ಕಾರಿ ಆಸ್ಪತ್ರೆಗೆ ಸ್ವಂತ ಹಣದಲ್ಲಿ 10 ಫ್ಯಾನ್‌ ತರಿಸಿದ MLA

ಭದ್ರಾವತಿ: ಶಾಸಕ ಬಿ.ಕೆ.ಸಂಗಮೇಶ್ವರ ಅವರು ತಾಲೂಕು ಆಸ್ಪತ್ರೆಯಲ್ಲಿ ದಿಢೀರ್‌ ಪರಿಶೀಲನೆ ನಡೆಸಿದರು. ಈ ವೇಳೆ ಆಸ್ಪತ್ರೆಯ ಅವ್ಯವಸ್ಥೆ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸ್ವಂತ ಹಣದಲ್ಲಿ 10 ಫ್ಯಾನ್‌ ತರಿಸಿಕೊಟ್ಟು ರೋಗಿಗಳಿಗೆ ನೆರವಾದರು.

ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.

ಭದ್ರಾವತಿ ತಾಲೂಕು ಆಸ್ಪತ್ರೆಯಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿಯ ಸಾಮಾನ್ಯ ಸಭೆಯಲ್ಲಿ ಶಾಸಕ ಬಿ.ಕೆ.ಸಂಗಮೇಶ್ವರ ಅವರು ಭಾಗವಹಿಸಿದ್ದರು. ಸಭೆ ಬಳಿಕ ಆಸ್ಪತ್ರೆಯ ಎಲ್ಲಾ ಕೊಠಡಿಗಳಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದರು.

ಸರ್ಕಾರಿ ಆಸ್ಪತ್ರೆಗೆ ಸ್ವಂತ ಹಣದಲ್ಲಿ 10 ಫ್ಯಾನ್‌ ತರಿಸಿದ MLA

ರೋಗಿಗಳು, ಕುಟುಂಬದ ಜೊತೆ ಚರ್ಚೆ

ಇದೇ ವೇಳೆ ಆಸ್ಪತ್ರೆಗೆ ಬಂದಿದ್ದ ರೋಗಿಗಳು, ಆರೈಕೆಗೆ ಬಂದಿದ್ದ ಕುಟುಂಬ ಸದಸ್ಯರ ಜೊತೆಗೆ ಶಾಸಕ ಸಂಗಮೇಶ್ವರ ಚರ್ಚೆ ನಡೆಸಿದರು. ಈ ವೇಳೆ ತಾಲೂಕು ಆಸ್ಪತ್ರೆಯಲ್ಲಿನ ಸಮಸ್ಯೆಗಳ ಕುರಿತು ರೋಗಿಗಳು, ಕುಟುಂಬದವರು ದೂರಿದರು.

ಸರ್ಕಾರಿ ಆಸ್ಪತ್ರೆಗೆ ಸ್ವಂತ ಹಣದಲ್ಲಿ 10 ಫ್ಯಾನ್‌ ತರಿಸಿದ MLA

ಸ್ವಂತ ಹಣದಲ್ಲಿ 10 ಫ್ಯಾನ್

ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಆಸ್ಪತ್ರೆಯ ವಾರ್ಡ್‌ಗಳಲ್ಲಿ ರೋಗಿಗಳು ಗಾಳಿಯ ವ್ಯವಸ್ಥೆಯಿಲ್ಲದೆ ಪರದಾಡುತ್ತಿದ್ದರು. ಇದನ್ನು ಗಮನಿಸಿದ ಶಾಸಕ ಸಂಗಮೇಶ್ವರ ಅವರು, ತಮ್ಮ ಸ್ವಂತ ಹಣದಲ್ಲಿ 10 ಹೊಸ ಫ್ಯಾನ್‌ಗಳನ್ನು ತರಿಸಿಕೊಟ್ಟರು. ಅಷ್ಟೇ ಅಲ್ಲದೆ, ಸ್ಥಳಕ್ಕೆ ಎಲೆಕ್ಟ್ರಿಷಿಯನ್‌ನನ್ನು ಕರೆಸಿ ತಕ್ಷಣವೇ ಫ್ಯಾನ್ ಅಳವಡಿಸಲು ಸೂಚಿಸಿದರು.

ಇದನ್ನೂ ಓದಿ : VISL ಕಾರ್ಮಿಕ ವಿನೋದ್‌ ಕುಟುಂಬಕ್ಕೆ ಆಸರೆಯಾದ ಎಂಎಲ್‌ಎ

ಸ್ವಚ್ಛತೆಗೆ ಇಲ್ಲದ ಶೌಚಾಲಯ

ಪರಿಶೀಲನೆ ವೇಳೆ ಆಸ್ಪತ್ರೆಯ ಶೌಚಾಲಯಗಳು ಕಳಪೆ ಸ್ಥಿತಿಯಲ್ಲಿರುವುದು ಕಂಡುಬಂದಿತು. ‘ಇದರಿಂದ ರೋಗಿಗಳಿಗೆ ತೊಂದರೆ ಆಗುತ್ತಿದೆ. ಇನ್ನೆರಡು ದಿನಗಳ ಒಳಗಾಗಿ ಎಲ್ಲಾ ಶೌಚಾಲಯಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಸುಸ್ಥಿತಿಗೆ ತರಬೇಕುʼ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಆಸ್ಪತ್ರೆಯ ಮೂಲಸೌಕರ್ಯದ ವಿಷಯದಲ್ಲಿ ಯಾವುದೇ ನಿರ್ಲಕ್ಷ್ಯ ವಹಿಸಬಾರದು ಎಂದು ಶಾಸಕ ಸಂಗಮೇಶ್ವರ ಸೂಚಿಸಿದರು.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion

Leave a Comment