ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯಲ್ಲಿ ಸೆಖೆ ಜೋರಿದೆ. ಅದಕ್ಕೆ ಪೂರಕವಾಗಿ ಬಿಸಿಲಿನ ಅಬ್ಬರವು ಹೆಚ್ಚಿದೆ. ಇವತ್ತೂ ಇದೇ ರೀತಿಯ ವಾತಾವರಣ (Weather) ಮುಂದುವರೆಯುವ ಸಾಧ್ಯತೆ ಇದೆ. ➤ ಸುದ್ದಿಯ ಮುಂದಿನ 8 ಪ್ಯಾರಾಗಳು ಕೆಳಗಿವೆ.
ಎಲ್ಲೆಲ್ಲಿ ಹೇಗಿರುತ್ತೆ ವಾತಾವರಣ?
ಶಿವಮೊಗ್ಗ ಮತ್ತು ಭದ್ರಾವತಿ: ಇಂದು ಗರಿಷ್ಠ 37°C ಮತ್ತು ಕನಿಷ್ಠ 21°C ತಾಪಮಾನ ಇರಲಿದೆ. ತೀವ್ರ ಸೆಖೆ, ಬಿಸಿಲಿನ ವಾತಾವರಣ.

ತೀರ್ಥಹಳ್ಳಿ: ಇಂದು ಗರಿಷ್ಠ 35°C ಮತ್ತು ಕನಿಷ್ಠ 19°C ತಾಪಮಾನ ಇರಲಿದೆ. ಭಾಗಶಃ ಬಿಸಿಲು.

ಹೊಸನಗರ: ಇವತ್ತು ಗರಿಷ್ಠ 36°C ಹಾಗೂ ಕನಿಷ್ಠ 20°C ತಾಪಮಾನ ಇರಲಿದೆ. ಮೋಡ, ಬಿಸಿಲು ಇರಲಿದೆ.
ಇದನ್ನೂ ಓದಿ : ಶಿವಮೊಗ್ಗದಲ್ಲಿ ಎಷ್ಟಿದೆ ಅಡಿಕೆ ರೇಟ್? ಇಲ್ಲಿದೆ ಇಂದಿನ ಧಾರಣೆ
ಸಾಗರ: ತಾಲೂಕಿನಲ್ಲಿ ಗರಿಷ್ಠ 33°C ಹಾಗೂ ಕನಿಷ್ಠ 21°C ತಾಪಮಾನ ದಾಖಲಾಗಲಿದೆ. ಬಿಸಿಲಿನ ವಾತಾವರಣ.
ಶಿಕಾರಿಪುರ: ತಾಲೂಕಿನಲ್ಲಿ ಇಂದು ಗರಿಷ್ಠ 37°C ಹಾಗೂ ಕನಿಷ್ಠ 21°C ತಾಪಮಾನ ದಾಖಲಾಗಲಿದೆ. ಸುಡು ಬಿಸಿಲಿನ ನಡುವೆ ಭಾಗಶಃ ಮೋಡ ಕವಿದ ವಾತಾವರಣ.
ಸೊರಬ: ಇವತ್ತು ಗರಿಷ್ಠ 37°C ಮತ್ತು ಕನಿಷ್ಠ 20°C ತಾಪಮಾನ ಇರಲಿದೆ. ಬಿಸಿಲಿನಿಂದ ಕೂಡಿದ ವಾತಾವರಣ.