ಹಣಗೆರೆ ಕಟ್ಟೆಯಿಂದ ಮರಳುವಾಗ ಹೊಳೆಹೊನ್ನೂರು ಬಳಿ ಕಾದಿದ್ದ ಜವರಾಯ, ಕುಟುಂಬಕ್ಕೆ ದಿಗ್ಭ್ರಮೆ

ಹೊಳೆಹೊನ್ನೂರು: ಹೊಳೆಹೊನ್ನೂರು ಸಮೀಪದ ಭದ್ರಾ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದ ಚಿತ್ರದುರ್ಗ (Chitradurga) ಮೂಲದ ಬಾಲಕನೊಬ್ಬ (Boy) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಮೃತ ಬಾಲಕನನ್ನು ಚಿತ್ರದುರ್ಗ ತಾಲ್ಲೂಕು ಪಾಮರಹಳ್ಳಿ ಗ್ರಾಮದ ನಿವಾಸಿ ಮೊಹಿದ್ದೀನ್ (16) ಎಂದು ಗುರುತಿಸಲಾಗಿದೆ. ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ಇಮಾಮ್ ಸಾಬ್ ಅವರು ಶನಿವಾರ ತನ್ನ ಕುಟುಂಬದೊಂದಿಗೆ ಅಶೋಕ್ ಲೇಲ್ಯಾಂಡ್ ದೋಸ್ತ್ ವಾಹನದಲ್ಲಿ ಹಣಗೆರೆ ಕಟ್ಟೆಗೆ ಹೋಗಿದ್ದರು. ಅಲ್ಲಿಂದ ತಮ್ಮೂರಿಗೆ ಮರಳುವಾಗ ಮಧ್ಯಾಹ್ನ ಹೊಳೆಹೊನ್ನೂರು ಹತ್ತಿರದ ಭದ್ರಾ ನದಿಯ ಹಳೆ ಸೇತುವೆ ಬಳಿ ಊಟ ಮಾಡಲು ವಾಹನ ನಿಲ್ಲಿಸಿದ್ದರು. ಈ ಸಮಯದಲ್ಲಿ ಇಮಾಮ್ ಸಾಬ್ ಅವರ ಮಕ್ಕಳಾದ ತಾಜುದ್ದೀನ್ ಮತ್ತು ಮೊಹಿದ್ದೀನ್ ನದಿ ನೀರಿಗೆ ಸ್ನಾನ ಮಾಡಲು ಇಳಿದಿದ್ದರು.

Chitradurga-boy-incident-at-Bhadra-river-near-holehonnuru-

Chitradurga-boy-incident-at-Bhadra-river-near-holehonnuru-

ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ತಾಜುದ್ದೀನ್ ನೀರಿನ ಸೆಳೆತಕ್ಕೆ ಸಿಲುಕಿ ಮುಂದೆ ಹೋಗಿದ್ದಾನೆ. ಆತನನ್ನು ರಕ್ಷಿಸಲು ಅಣ್ಣ ಮೊಹಿದ್ದೀನ್ ಸಹ ನೀರಿಗೆ ಇಳಿದಿದ್ದಾನೆ. ಈ ವೇಳೆ ತಂದೆ ಇಮಾಮ್ ಸಾಬ್ ಅವರು ನದಿಗೆ ಇಳಿದು ಮಗ ತಾಜುದ್ದೀನ್‌ನನ್ನು ಮೇಲಕ್ಕೆ ತರುವಲ್ಲಿ ಯಶಸ್ವಿಯಾದರು, ಆದರೆ ಅಷ್ಟರಲ್ಲೇ ಮೊಹಿದ್ದೀನ್ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದ. ನಂತರ ಸ್ಥಳೀಯರ ನೆರವಿನಿಂದ ಹುಡುಕಾಡಿದಾಗ ಮೊಹಿದ್ದೀನ್ ಪತ್ತೆಯಾಗಿದ್ದ. ತಕ್ಷಣವೇ ಆತನನ್ನು ಹೊಳೆಹೊನ್ನೂರು ಸಮುದಾಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಬಾಲಕನನ್ನು ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಘಟನೆ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಹಾವು ಕಚ್ಚಿ ಗರ್ಭಿಣಿ ಸಾವು, ದುರ್ಘಟನೆ ಆಗಿದ್ದೆಲ್ಲಿ?

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion