ಕೇಂದ್ರ ಸರ್ಕಾರದ ಸಮಿತಿಗೆ ಸಂಸದ ರಾಘವೇಂದ್ರ ಮರು ನೇಮಕ

ಶಿವಮೊಗ್ಗ: ಸಂಸದ ಬಿ.ವೈ. ರಾಘವೇಂದ್ರ ಅವರು 2026-27ನೇ ಸಾಲಿಗೆ ಲೋಕಸಭೆಯ ಮಹತ್ವದ ಸಾರ್ವಜನಿಕ ಉದ್ಯಮಗಳ (Public Undertakings) ಸಮಿತಿಯ (ಕಮಿಟಿ ಆನ್ ಪಬ್ಲಿಕ್ ಅಂಡರ್‌ಟೇಕಿಂಗ್ಸ್) ಸದಸ್ಯರಾಗಿ (Member) ಮರು ಆಯ್ಕೆಯಾಗಿದ್ದಾರೆ. ಈ ಮೂಲಕ ಸತತ ಮೂರನೇ ಬಾರಿಗೆ ಪ್ರತಿಷ್ಠಿತ ಸಮಿತಿಗೆ ಆಯ್ಕೆಯಾಗಿರುವುದು ವಿಶೇಷವಾಗಿದೆ.

ಸಮಿತಿಯ ಅಧ್ಯಕ್ಷರಾಗಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರೂ ಆಗಿರುವ ಸಂಸದ ಬೈಜಯಂತ ಪಾಂಡಾ ನೇಮಕವಾಗಿದ್ದಾರೆ. ಬಿ.ವೈ. ರಾಘವೇಂದ್ರ ಅವರನ್ನು ಮರುನೇಮಕ ಮಾಡಿರುವುದು ಅವರ ಸಂಸದೀಯ ಕಾರ್ಯವೈಖರಿಯ ಮೇಲಿರಿಸಿದ ವಿಶ್ವಾಸದ ಸಂಕೇತವಾಗಿದೆ.

Will the Karnataka government announce ₹1 lakh per hectare compensation for crop damage as demanded by MP B.Y. Raghavendra?

Will the Karnataka government announce ₹1 lakh per hectare compensation for crop damage as demanded by MP B.Y. Raghavendra?

ಸತತ ಮೂರನೇ ಬಾರಿ ಸಾರ್ವಜನಿಕ ಉದ್ಯಮಗಳ ಸಮಿತಿಗೆ ತಮ್ಮನ್ನು ಆಯ್ಕೆ ಮಾಡಿ ಜವಾಬ್ದಾರಿ ನೀಡಿದ ನಾಯಕರಿಗೆ ಕೃತಜ್ಞನಾಗಿದ್ದೇನೆ. ತಮ್ಮ ಮೇಲೆ ಇಟ್ಟಿರುವ ನಂಬಿಕೆ ಹಾಗೂ ಭರವಸೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳ ಸುಧಾರಣೆ ಹಾಗೂ ಜನಹಿತದ ವಿಚಾರಗಳಲ್ಲಿ ಅತ್ಯುತ್ತಮ ಕೊಡುಗೆ ನೀಡಲು ಶ್ರಮಿಸುತ್ತೇನೆ.

– ಬಿ.ವೈ.ರಾಘವೇಂದ್ರ, ಸಂಸದ

ಇದನ್ನೂ ಓದಿ : ಶಿವಮೊಗ್ಗ ವಿಮಾನ ನಿಲ್ದಾಣ ಕೇಂದ್ರಕ್ಕೆ ಹಸ್ತಾಂತರ ಆಗುತ್ತಾ? ಖಾಸಗಿ ನಿರ್ವಾಹಣೆಗೆ ವಹಿಸಲಾಗುತ್ತಾ?