ಶಿವಮೊಗ್ಗ: ರಾಜ್ಯಾದ್ಯಂತ ಮೇ ತಿಂಗಳಲ್ಲಿ ಬಿಸಿಲಿನ ತಾಪಮಾನ (Heat Wave) ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆ ಜಾನುವಾರುಗಳ ಆರೋಗ್ಯ ಕಾಪಾಡಲು ಪಶುಪಾಲಕರು ಮುನ್ನೆಚ್ಚರಿಕೆ ವಹಿಸುವಂತೆ ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್ ತಿಳಿಸಿದ್ದಾರೆ. ➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಪಶುಪಾಲಕರಿಗೆ ನೀಡಿದ ಸೂಚನೆಗಳೇನು?
- ನೆರಳಿನ ಆಸರೆ: ಮಧ್ಯಾಹ್ನದ ಕಡು ಬಿಸಿಲಿನಲ್ಲಿ ಜಾನುವಾರುಗಳನ್ನು ಮೇಯಲು ಬಿಡಬಾರದು. ಬದಲಿಗೆ ಮರಗಳ ಕೆಳಗೆ ಅಥವಾ ತಂಪಾದ ನೆರಳಿನ ಪ್ರದೇಶಗಳಲ್ಲಿ ಅವುಗಳನ್ನು ಕಟ್ಟಿಹಾಕಬೇಕು.
- ಕೊಟ್ಟಿಗೆಯ ತಂಪು: ಕೊಟ್ಟಿಗೆಯ ಮೇಲ್ಛಾವಣಿಯ ತಾಪಮಾನ ಕಡಿಮೆ ಮಾಡಲು ಸುಣ್ಣದ ಲೇಪನ ಮಾಡಬೇಕು ಅಥವಾ ತೆಂಗಿನ ಗರಿಗಳನ್ನು ಹೊದಿಸಬೇಕು.
- ದೇಹದ ಉಷ್ಣತೆ ನಿಯಂತ್ರಣ: ಮಧ್ಯಾಹ್ನದ ವೇಳೆ ಜಾನುವಾರುಗಳಿಗೆ ಒದ್ದೆಯಾದ ಗೋಣಿ ಚೀಲಗಳನ್ನು ಹೊದಿಸುವುದು ಉತ್ತಮ. ಜಾನುವಾರುಗಳ ಮೈಮೇಲೆ ನೀರನ್ನು ಸಿಂಪಡಿಸುವ ಮೂಲಕ ಅವುಗಳ ದೇಹವನ್ನು ತಂಪಾಗಿರಿಸಬೇಕು.
- ನೀರು ಮತ್ತು ಆಹಾರ: ಜಾನುವಾರುಗಳಿಗೆ ಕುಡಿಯಲು ಸದಾ ಕಾಲ ಸ್ವಚ್ಛ ಮತ್ತು ತಂಪಾದ ನೀರಿನ ವ್ಯವಸ್ಥೆ ಇರಬೇಕು. ಆಹಾರದಲ್ಲಿ ರಸಮೇವು, ಪೌಷ್ಟಿಕಾಂಶದ ಪೂರಕಗಳನ್ನು ನೀಡಲು ಗಮನ ಹರಿಸಬೇಕು.
- ಕೀಟಗಳ ನಿಯಂತ್ರಣ: ಕೊಟ್ಟಿಗೆಯಲ್ಲಿ ಸೊಳ್ಳೆ ಮತ್ತು ಕೀಟಗಳ ಬಾಧೆಯನ್ನು ನಿಯಂತ್ರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.
ಇದನ್ನೂ ಓದಿ : ಶಿವಮೊಗ್ಗದಲ್ಲಿ ಇವತ್ತು ಅಡಿಕೆ ರೇಟ್ ಎಷ್ಟಿದೆ? ತೀರ್ಥಹಳ್ಳಿ, ಭದ್ರಾವತಿಯಲ್ಲಿ ಯಾವ್ಯಾವ ಅಡಿಕೆ ಧಾರಣೆ ಏನಿದೆ?

ಈ ಸರಳ ಕ್ರಮಗಳನ್ನು ಅನುಸರಿಸುವ ಮೂಲಕ ಪಶುಪಾಲಕರು ತಮ್ಮ ಜಾನುವಾರುಗಳ ಆರೋಗ್ಯ ಮತ್ತು ಹಾಲಿನ ಉತ್ಪಾದನೆಯನ್ನು ಸ್ಥಿರವಾಗಿಟ್ಟುಕೊಳ್ಳಬಹುದು ಎಂದು ಪಶುವೈದ್ಯಕೀಯ ಮಹಾವಿದ್ಯಾಲಯದ ಪ್ರಕಟಣೆ ತಿಳಿಸಿದೆ.