ಶಿವಮೊಗ್ಗದಲ್ಲಿ ಬೇಕರಿ ಉತ್ಪನ್ನಗಳ ತಯಾರಿ ತರಬೇತಿ, ಎಲ್ಲಿ? ಯಾರೆಲ್ಲ ಸೇರಬಹುದು?

ಶಿವಮೊಗ್ಗ: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ಮೇ 15 ರಿಂದ ಜೂನ್ 13ರವರೆಗೆ ಬೇಕರಿ ಘಟಕದಲ್ಲಿ ವಿವಿಧ ಉತ್ಪನ್ನಗಳ (bakery products) ತಯಾರಿಕೆ ಕುರಿತು ತರಬೇತಿ ನೀಡಲು ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ➤ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

ಏನೆಲ್ಲ ತರಬೇತಿ ಇರಲಿದೆ?

ವಿವಿಧ ಮಾದರಿಯ ಬಿಸ್ಕತ್ತುಗಳು, ಕೇಕ್‌ ಮತ್ತು ಇತರೆ ಬೇಕರಿ ಉತ್ಪನ್ನಗಳ ತಯಾರಿ ಕುರಿತು ತರಬೇತಿ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Agriculture-University-Iruvakki-sagara-campus-board

  • ಬಿಸ್ಕತ್ತುಗಳು: ಬೆಣ್ಣೆ ಬಿಸ್ಕತ್ತು, ಕೋಕೊನಟ್ ಕುಕಿಸ್, ಮಸಾಲ ಬಿಸ್ಕತ್ತು, ಪೀನಟ್ ಕುಕಿಸ್ ಹಾಗೂ ವೆನಿಲ್ಲಾ ಬಟನ್.
  • ಕೇಕ್ ವಿಧಗಳು: ಬನಾನಾ ಕೇಕ್, ಫ್ರೂಟ್ ಕೇಕ್, ಸ್ಪಾಂಜ್ ಕೇಕ್, ಚಾಕಲೇಟ್ ಕೇಕ್, ಪೇಸ್ಟ್ರೀ ಕೇಕ್ ಮತ್ತು ಜೆಲ್ ಕೇಕ್.
  • ಇತರೆ ಉತ್ಪನ್ನ: ಮಿಲ್ಕ್ ಬ್ರೆಡ್, ಬನ್, ರಸ್ಕ್, ಪಿಜ್ಜಾ, ಪಪ್ ಪೇಸ್ಟ್ರೀ, ದಿಲ್ ಪಸಂದ್, ಡೋ ನಟ್ ಹಾಗೂ ಬಾಂಬೆ ಖಾರ.
010521 Agriculture University Shimoga 1

ತರಬೇತಿಯ ಪ್ರಮುಖ ಮಾಹಿತಿಗಳು

ತರಬೇತಿಯು ಮೇ 15 ರಿಂದ ಜೂನ್ 13 ರವರೆಗೆ ನಡೆಯಲಿದೆ. ನವುಲೆಯಲ್ಲಿರುವ ಕೃಷಿ ಮಹಾವಿದ್ಯಾಲಯ ಆವರಣದಲ್ಲಿ ತರಬೇತಿ ನಡೆಯಲಿದೆ. ಇದಕ್ಕೆ ₹4,500 ಶುಲ್ಕ ಇರಲಿದೆ. ಮೇ 14 ನೋಂದಣಿಗೆ ಕೊನೆಯ ದಿನಾಂಕವಾಗಿದೆ. ಇನ್ನು, ತರಬೇತಿಯ ಸಮಯದಲ್ಲಿ ಅಭ್ಯರ್ಥಿಗಳಿಗೆ ಊಟ ಮತ್ತು ವಸತಿ ಸೌಲಭ್ಯ ಇರುವುದಿಲ್ಲ.

ಇದನ್ನೂ ಓದಿ : ಸಿಗಂದೂರಿನಲ್ಲಿ ಅಗ್ನಿವೀರ್‌, ಪ್ಯಾರಾ ಮಿಲಿಟರಿ, ಪೊಲೀಸ್‌ ಹುದ್ದೆಗಳ ಆಕಾಂಕ್ಷಿಗಳಿಗೆ ಉಚಿತ ತರಬೇತಿ

ನೋಂದಣಿ ಮಾಡಿಕೊಳ್ಳುವುದು ಹೇಗೆ?

ಆಸಕ್ತರು ಖುದ್ದಾಗಿ ಕೃಷಿ ಮಹಾವಿದ್ಯಾಲಯವನ್ನು ಸಂಪರ್ಕಿಸಬಹುದು. ಈ ಮೊಬೈಲ್ ಸಂಖ್ಯೆಗಳ ಮೂಲಕವು ಮಾಹಿತಿ ಪಡೆಯಬಹುದಾಗಿದೆ. ಡಾ. ಜಯಶ್ರೀ ಎಸ್, ಮೊಬೈಲ್‌ ಸಂಖ್ಯೆ:  9449187763, ಜಯಶಂಕರ, ಮೊಬೈಲ್‌ ಸಂಖ್ಯೆ 9686555897 ಸಂಪರ್ಕಿಸಬಹುದು.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
ಮುಂದಿನ ಸುದ್ದಿ ಓದಿ TRENDING

ಶಿವಮೊಗ್ಗದಲ್ಲಿ ದೊಡ್ಡಪೇಟೆ ಠಾಣೆ ಪೊಲೀಸರ ದಾಳಿ, ₹65,000 ಮೌಲ್ಯದ ಮಾದಕ ವಸ್ತು ಸಹಿತ ಒಬ್ಬ ಅರೆಸ್ಟ್‌