ಶಿವಮೊಗ್ಗ APMCಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಯ್ತು ವ್ಯಕ್ತಿಯ ವೃತದೇಹ, ಆಗಿದ್ದೇನು? ಯಾರಿದು ವ್ಯಕ್ತಿ?

ಶಿವಮೊಗ್ಗ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (APMC) ಆವರಣದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ನಗರದ ಬೆಂಕಿ ನಗರದ (Benki Nagar) ನಿವಾಸಿ ಆನಂದ (38) ಮೃತದೇಹ ಕೊಳೆತ ಸ್ಥಿತಿಯಲ್ಲಿ ದೊರೆತಿದೆ. ಆನಂದ ಕಳೆದ 15 ವರ್ಷಗಳಿಂದ ಎಪಿಎಂಸಿ ಮಾರುಕಟ್ಟೆಯಲ್ಲಿ ಹಮಾಲಿ ಕೆಲಸ ಮಾಡಿಕೊಂಡಿದ್ದರು. ಕಳೆದ ಕೆಲವು ವರ್ಷಗಳಿಂದ ಫಿಟ್ಸ್ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ. ಅದಕ್ಕಾಗಿ ವೈದ್ಯಕೀಯ ಚಿಕಿತ್ಸೆ (Medical Treatment) ಪಡೆಯುತ್ತಿದ್ದರು ಎಂದ ಸಹೋದ್ಯೋಗಿಗಳು ತಿಳಿಸಿದ್ದಾರೆ.

Man-Succumbed-at-Shimoga-APMC

ಇತ್ತೀಚಿಗೆ ಮನೆಗೆ ಹೋಗಿರಲಿಲ್ಲ. ಮಾರುಕಟ್ಟೆ ಆವರಣದಲ್ಲಿಯೇ ವಾಸ್ತವ್ಯ ಹೂಡಿದ್ದರು. ಸ್ವಲ್ಪ ದಿನದಿಂದ ಆನಂದ್‌ ಎಲ್ಲಿಯು ಕಾಣಿಸಿರಲಿಲ್ಲ. ಕಳೆದ ಮೂರ್ನಾಲ್ಕು ದಿನದಿಂದ ಎಪಿಎಂಸಿ ಆವರಣದಲ್ಲಿ ದುರ್ವಾಸನೆ (Foul Smell) ಬರುತ್ತಿತ್ತು. ಈ ಹಿನ್ನೆಲೆ ಪರಿಶೀಲಿಸಿದಾಗ ಮುಂಡಿಯ ತಾರಸಿಯ ಮೇಲೆ ಶವ ಪತ್ತೆಯಾಗಿದೆ.‌ ವಿಷಯ ತಿಳಿಯುತ್ತಿದ್ದಂತೆಯೇ ವಿನೋಬನಗರ (Vinoba Nagar) ಠಾಣೆಯ ಪೊಲೀಸರು (Police Station) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆನಂದ್ ಸಾವಿನ ಕಾರಣವೇನು ಎಂಬುದು ಇನ್ನಷ್ಟೆ ತಿಳಿಯಬೇಕಿದೆ.

ಚಿತ್ರದ ವಿವರಣೆ
Shaki Toyota, Shivamogga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : May 9, 2026 at 10:38 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಮೇ 9, 2026