ಶಿವಮೊಗ್ಗದಲ್ಲಿ ಇವತ್ತು ಸುಡು ಬಿಸಿಲು, ವಿವಿಧೆಡೆ ಮೋಡ, ಮಳೆಯ ಸಾಧ್ಯತೆ ಇದೆಯಾ?

ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯಲ್ಲಿ ಬಿಸಿಲಿನ ಅಬ್ಬರ, ಸೆಖೆ ಮುಂದುವರೆದಿದೆ. ಧಗೆಯಿಂದಾಗಿ ಜನ ಹೈರಣಾಗಿದ್ದಾರೆ. ಇವತ್ತೂ ಇದೇ ವಾತಾವರಣ ಇರುವ ಸಾಧ್ಯತೆ ಇದೆ. ಇನ್ನೊಂದೆಡೆ ಜಿಲ್ಲೆಯ ವಿವಿಧೆಡೆ ತುಂತುರು ಅಥವಾ ಸಾಧಾರಣ ಮಳೆಯಾಗಬಹುದು ಎಂದು ಅಂದಾಜಿಸಲಾಗಿದೆ. (ಈ ಸುದ್ದಿಯನ್ನು ಇನ್ನು 47 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಇಲ್ಲಿದೆ ತಾಲೂಕುವಾರು ಹವಾಮಾನ ವರದಿ

ಶಿವಮೊಗ್ಗ, ಭದ್ರಾವತಿ: ತಾಲೂಕುಗಳಲ್ಲಿ ಗರಿಷ್ಠ 38°C ಮತ್ತು ಕನಿಷ್ಠ 22°C ತಾಪಮಾನ ದಾಖಲಾಗಲಿದೆ. ಬಿಸಿಲು ಮತ್ತು ತೀವ್ರ ಸೆಖೆಯ ವಾತಾವರಣ.

Shivamogga-Weather-Report

ತೀರ್ಥಹಳ್ಳಿ: ಇವತ್ತು ಗರಿಷ್ಠ 36°C ಹಾಗೂ ಕನಿಷ್ಠ 20°C ತಾಪಮಾನ ದಾಖಲಾಗಲಿದೆ. ಸಾಧಾರಣ ಸೆಖೆ. ಭಾಗಶಃ ಬಿಸಿಲಿನ ವಾತಾವರಣ.

ಹೊಸನಗರ: ಇಂದು ಗರಿಷ್ಠ 37°C ಮತ್ತು ಕನಿಷ್ಠ 21°C ತಾಪಮಾನ ಇರಲಿದೆ. ಬಿಸಿಲು ಮತ್ತು ಮೋಡದ ವಾತಾವರಣ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ

ಸಾಗರ: ಈ ದಿನ ಗರಿಷ್ಠ 34°C ಮತ್ತು ಕನಿಷ್ಠ 21°C ತಾಪಮಾನ ಇರಲಿದೆ. ಮೋಡದ ವಾತಾವರಣ. ಬಿಸಿಲಿನ ಅಬ್ಬರ.

ಶಿಕಾರಿಪುರ: ಇಂದು ಗರಿಷ್ಠ 39°C ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ. ಕನಿಷ್ಠ 21°C ತಾಪಮಾನವಿರಲಿದೆ. ಬಿಸಿಲ ಧಗೆ ಇಲ್ಲಿ ತೀವ್ರವಾಗಿ ಇರಲಿದೆ. ಸೊರಬ: ತಾಲೂಕಿನಲ್ಲಿ ಗರಿಷ್ಠ 38°C ಹಾಗೂ ಕನಿಷ್ಠ 21°C ತಾಪಮಾನ ಇರಲಿದೆ. ಮೋಡಗಳು ಕಾಣಿಸಿಕೊಳ್ಳಬಹುದು. ಬಿಸಿಲಿನ ಅಬ್ಬರ ಹೆಚ್ಚಿರಲಿದೆ.

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ: